ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

0

ವಿದ್ಯಾರ್ಥಿಗಳಿಗೆ ಆರತಿ ಮಾಡಿ ಸ್ವಾಗತ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡು ಇಲ್ಲಿ ಶಾಲಾ ಪ್ರಾರಂಭೋತ್ಸವ ನಡೆಯಿತು. ಶಾಲಾ ಪ್ರಾರ್ಥನೆಯ ಬಳಿಕ ಮೆರವಣಿಗೆ ಕಾರ್ಯಕ್ರಮ ನಡೆಯಿತು. ಒಂದನೇ ತರಗತಿಯ ಪುಟಾಣಿ ಮಕ್ಕಳನ್ನು ಆರತಿ ಎತ್ತುವುದರ ಮೂಲಕ ಸ್ವಾಗತಿಸಲಾಯಿತು ನಂತರ ಸಭಾ ಕಾರ್ಯಕ್ರಮ ಮುಂದುವರೆಯಿತು. ಸಭಾ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ನವೀನ ಕುಮಾರ್ ಅರಳಿಕಟ್ಟೆ ವಹಿಸಿದ್ದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಜಾತಾ ಪವಿತ್ರಮಜಲು,ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶ್ರೀಮತಿ ರಾಜೀವಿ ಉದ್ದಂಪಾಡಿ ಯೋಗಿಶ್ ಕಲ್ಲಗದ್ದೆ ಗ್ರಾಮ ಪಂಚಾಯತ್ ಸದಸ್ಯರು,ಪೋಷಕರ ನಿಧಿಯ ಅಧ್ಯಕ್ಷ ನಾಗಪ್ಪ ಗೌಡ ಪಾಲೆಪ್ಪಾಡಿ,ಎಸ್ ಡಿ ಎಂ ಸಿ ಸದಸ್ಯರುಗಳಾದ ಖಲಂದರ್ ಶರೀಫ್ ಐವರ್ನಾಡು, ಚಿದಾನಂದ ಉದ್ದಂಪಾಡಿ, ಶ್ರೀಮತಿಮೀನಾಕ್ಷಿ ನಿಡುಬೆ, ಶ್ರೀಮತಿ ಕವಿತಾ ಶಾಂತಿಮೂಲೆ, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಹೇಮಾವತಿ, ಗ್ರಾಮ ಪಂಚಾಯತ್ ಗ್ರಂಥ ಪಾಲಕಿ ಶ್ರೀಮತಿ ಲೀಲಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಯಿತು.

ಅಧ್ಯಕ್ಷರು ಅತಿಥಿಗಳೆಲ್ಲರೂ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವಕ್ಕೆ ಶುಭ ಹಾರೈಸಿದರು. ನಂತರ ಪೋಷಕರ ಸಭೆ ನಡೆಯಿತು. ಅತಿಥಿ ಶಿಕ್ಷಕಿಯ ನೇಮಕಾತಿಯ ಬಗ್ಗೆ ಚರ್ಚಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಹೇಮಾವತಿ ಎಲ್ಲರನ್ನ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಮತಿ ಸರಸ್ವತಿ ಎಲ್ಲರಿಗೂ ವಂದಿಸಿದರು. ಶ್ರೀಮತಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಮಾಲತಿ ಶ್ರೀಮತಿ ಹೇಮಲತಾ ಶ್ರೀಮತಿ ಸರಿತಾ ಸಹಕರಿಸಿದರು. ಗ್ರಾಮ್ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಜಾತಾ ಪವಿತ್ರ ಮಜಲು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಯೋಗೀಶ್ ಕಲ್ಲಗದ್ದೆ ಎಲ್ಲರಿಗೂ ಸಿಹಿ ತಿಂಡಿ ನೀಡಿ ಸಹಕರಿಸಿದರು. ಎಸ್ ಡಿ ಎಂ ಸಿ ಸದಸ್ಯರಾದ ಖಲಂದರ್ ಶರೀಫ್ ಐವರ್ನಾಡು ಇವರು ಮಧ್ಯಾಹ್ನದ ಸಿಹಿ ಭೋಜನವನ್ನು ನೀಡಿ ಸಹಕರಿಸಿದರು.