ನೂತನ ಶಾಸಕಿ ಭಾಗೀರಥಿ ಮುರುಳ್ಯರಿಗೆ ತಾಲೂಕು ಆಡಳಿತ, ನೌಕರರ ಸಂಘದಿಂದ ಗೌರವ

0

ಶಾಸಕಿಯಾಗಿ ಚುನಾಯಿತರಾದ ಭಾಗೀರಥಿ ಮುರುಳ್ಯರಿಗೆ ತಾಲೂಕು ಆಡಳಿತ ಹಾಗೂ ನೌಕರರ ಸಂಘದಿಂದ ಗೌರವ ಸಲ್ಲಿಸಲಾಯಿತು.
ಮೇ.೩೧ರಂದು ತಾಲೂಕು ಪಂಚಾಯತ್ ನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ತಾಲೂಕು ಆಡಳಿತದ ಪರವಾಗಿ ತಹಶೀಲ್ದಾರ್ ಜಿ.ಮಂಜುನಾಥ್ ಶಾಸಕರನ್ನು ಗೌರವಿಸಿದರು.

ಬಳಿಕ ತಾಲೂಕು ಪಂಚಾಯತ್ ವತಿಯಿಂದ ಇ.ಒಮ. ಭವಾನಿಶಂಕರ್ ಗೌರವಿಸಿದರೆ, ಅಧಿಕಾರಿಗಳು ಎಲ್ಲರೂ ತೆರಳಿ ಶಾಸಕರಿಗೆ ಹೂ ನೀಡಿ ಗೌರವಿಸಿದರು.

ಅಧಿಕಾರಿಗಳ ಸಭೆ ಮುಗಿಯುತ್ತಿದ್ದಂತೆ ತಾಲೂಕು ಸರಕಾರಿ ನೌಕರರ ಸಂಘದಿಂದ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಕುದ್ಪಾಜೆ, ರಾಜ್ಯ ಪರಿಷತ್ ಸದಸ್ಯ ಪೃಥ್ವಿ ಕುಮಾರ್ ಹಾಗೂ ಪದಾಧಿಕಾರಿಗಳಿದ್ದ ಗೌರವ ನೆರವೇರಿಸಿದರು.