ಮುಡ್ನೂರು‌ ಮರ್ಕಂಜ ಶಾಲೆಯ ಪ್ರಾರಂಭೋತ್ಸವ – ಪುಸ್ತಕ ಕೊಡುಗೆ- ಇನ್ವರ್ಟರ್ ಕೊಡುಗೆ

0

ಮಿತ್ತಡ್ಕ ಶಾಲಾ ಎಸ್ ಡಿಎಂಸಿ‌ ವಿವಾದದಿಂದ ದಾಖಲಾತಿ ಹೆಚ್ಚಿಸಿಕೊಂಡ ಮುಡ್ನೂರು ಮರ್ಕಂಜ ಶಾಲೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡ್ನೂರು ಮರ್ಕಂಜದ ಶಾಲಾರಂಭ, ನೂತನ‌ ಮಕ್ಕಳಿಗೆ ಸ್ವಾಗತ ಕಾರ್ಯಕ್ರಮ ಮತ್ತು ಇನ್ ವರ್ಟರ್ ಕೊಡುಗೆ ಪುಸ್ತಕ ಕೊಡುಗೆ ಕಾರ್ಯಕ್ರಮವು ಇಂದು ನಡೆಯಿತು.

ಬೆಳಿಗ್ಗೆ ಮರ್ಕಂಜ ಪೇಟೆಯಿಂದ ಶಾಲೆಯವರಿಗೆ ಬ್ಯಾಂಡ್ ವಾಳಗದೊಂದಿಗೆ ವಿದ್ಯಾರ್ಥಿಗಳನ್ನು ಕರೆತರಲಾಯಿತು.‌ ನೂತನ ಮಕ್ಕಳಿಗೆ ಆರತಿ ಎತ್ತಿ ತಿಲಕವಿಟ್ಟು ಹೂ ನೀಡಿ ಸ್ವಾಗತಿಸಲಾಯಿತು.‌ ಬಳಿಕ ಸಭಾ ಕಾರ್ಯಕ್ರಮ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ‌ ಬೊಮ್ಮೆಟ್ಟಿ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಅನಿತಾ ರೈ ಪಟ್ಟೆ, ಸಹೋದರ ಜಗದೀಶ್ ರೈ ಪಟ್ಟೆಯವರು ಕೊಡಮಾಡಿದ ರೂ.54,000 ಮೌಲ್ಯದ ಇನ್ವರ್ಟರ್ ನ್ನು ಇಂದು ಶಾಲೆಗೆ ಹಸ್ತಾಂತರ ಮಾಡಲಾಯಿತು.

ಹಾಗೂ ನೂತನವಾಗಿ ಮಕ್ಕಳನ್ನು ಸೇರ್ಪಡೆಗೊಳಿಸಿದ ಪೋಷಕರಾದ ಹೇಮಕುಮಾರ್ ಜೋಗಿಮೂಲೆ, ಸಂಧ್ಯಾ ದೋಳ ಮತ್ತಿತರರು ದಾನಿಗಳ‌ ನೆರವಿನಿಂದ ಸಂಗ್ರಹಿಸಿದ ನೋಟ್ ಪುಸ್ತಕವನ್ನು ಮುಡ್ನೂರು ಮರ್ಕಂಜ ಶಾಲೆಯ ಎಲ್ಲಾ ಮಕ್ಕಳಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಅನಿಲ್ ಅಂಬೆ ಕಲ್ಲು, ಮಿತ್ತಡ್ಕ ಮರ್ಕಂಜ ಶಾಲೆಯಲ್ಲಿ ಎಸ್ ಡಿಎಂಸಿ ಅಧ್ಯಕ್ಷೆಯಾಗಿದ್ದ ಶ್ರೀಮತಿ ಸಂಧ್ಯಾ ದೋಳ, ಪೋಷಕರಾದ ಜಗನ್ನಾಥ ಜಯನಗರ, ಶಾಲಾ ಮುಖ್ಯೋಪಾಧ್ಯಾಯರಾದ ದೇವರಾಜ ಎಸ್.ಕೆ., ಹಿರಿಯ ಶಿಕ್ಷಕರಾದ ಬೆಳ್ಳಪ್ಪ ಕೆ ಹಾಗೂ ಶಿಕ್ಷಕಿಯರಾದ ಶ್ರೀಮತಿ ಚಿನ್ನಮ್ಮ ಪಿ ಹಾಗೂ ಮಮತಾ ಹಾಗೂ ನಿಶಾ ಕೆ ಮತ್ತು ವಿದ್ಯಾರ್ಥಿಗಳ ಪೋಷಕರು‌ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಿತ್ತಡ್ಕ ಶಾಲೆಯ ಎಸ್ ಡಿಎಂಸಿ‌ ವಿವಾದದಿಂದಾಗಿ ಮುಡ್ನೂರು ಮರ್ಕಂಜ ಶಾಲೆ ತಮ್ಮ ದಾಖಲಾತಿ ಹೆಚ್ಚಿಸಿಕೊಂಡಿದೆ.
ಮಿತ್ತಡ್ಕ ಶಾಲೆಯ ಸುಮಾರು 18 ಮಕ್ಕಳು, ದಾಸರಬೈಲು ಶಾಲೆಯ 4 ಮಕ್ಕಳು ಮುಡ್ನೂರು ಮರ್ಕಂಜ ಶಾಲೆಗೆ ಸೇರ್ಪಡೆಗೊ‌ಂಡಿದ್ದಾರೆ.