ಗೂನಡ್ಕ : ತೆಕ್ಕಿಲ್ ಶಾಲಾ ಪ್ರಾರಂಭೋತ್ಸವ

0

ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಪೋಷಕರ ಸಭೆ

ಗೂನಡ್ಕ ತೆಕ್ಕಿಲ್ ಶಾಲಾ ಪ್ರಾರಂಭೋತ್ಸವ ಮತ್ತು ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಮೇ 31 ರಂದು ನಡೆಯಿತು.

ನೂತನ ಆಡಳಿತ ಮಂಡಳಿಯ ಗೌರವಾಧ್ಯಕ್ಷರಾದ ತಾಜ್ ಮಹಮ್ಮದ್, ಅಧ್ಯಕ್ಷರಾದ ಉನೈಸ್ ಪೆರಾಜೆ, ಸದಸ್ಯರಾದ ಉಮರ್ ಹಾಜಿ ಪಿ ಎ, ರಹೀಂ ಬೀಜದಕಟ್ಟೆ, ಹಾರಿಸ್ ಗೂನಡ್ಕ, ಎಸ್ ಡಿ ಎಂ ಸಿ ಅಧ್ಯಕ್ಷರಾದ ದಿನಕರ ಸಣ್ಣಮನೆ, ತೆಕ್ಕಿಲ್ ಪ್ರತಿಷ್ಠಾನ ಕಾರ್ಯದರ್ಶಿ ಅಶ್ರಫ್ ಗುಂಡಿ ಉಪಸ್ಥಿತರಿದ್ದರು. ಪೋಷಕರು ವಿದ್ಯಾರ್ಥಿಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಎಲ್ಲರಿಗೂ ಸಿಹಿ ತಿಂಡಿ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ 606 ಅಂಕ ಗಳಿಸಿದ ಲವಿತ್ ಎ, ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ತೇರ್ಗಡೆಯಾದ ರೇಷ್ಮಾ ಡಿ, ಜಶಿಕಾ ಎ, ಉಫೈಫ್ ಟಿ ಯು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಸಂಶೀರ್, ಫಾತಿಮ ಸುಫೈರಾ ಟಿ ಯು, ತನುಶ್ರೀ ಪಿ ವಿ, ಅಬ್ದುಲ್ ಶಬಾಬ್, ಮುಹಮ್ಮದ್ ಸಿಮಾಕ್, ಫಾತಿಮತ್ ಶಿಬಾ ಎಂಬ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.


ನಂತರ ಪೋಷಕರ ಸಭೆ ನಡೆಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಮುಖ್ಯೋಪಾಧ್ಯಾಯರಾದ ಸಂಪತ್ ರವರು ಎಲ್ಲರನ್ನೂ ಸ್ವಾಗತಿಸಿ, ಸಹಶಿಕ್ಷಕಿ ಸೌಮ್ಯ ರವರು ವಂದಿಸಿದರು. ಸಾದಿಕ್ ರವರು ಕಾರ್ಯಕ್ರಮ ನಿರೂಪಿಸಿದರು.