ಡಾ. ಮಧು ಎಂ. ಅವರಿಗೆ ಚೆನ್ನೈ ವಿಶ್ವ ಮಹಾವಿದ್ಯಾಲಯದಿಂದ ಡಾಕ್ಟರೇಟ್ ಪದವಿ

0


ಸುಳ್ಯದವರಾಗಿದ್ದು, ಪ್ರಸ್ತುತ ಹಾಸನದಲ್ಲಿ ಉದ್ಯೋಗಿಯಾಗಿರುವ ಶ್ರೀಮತಿ ಡಾ. ಮಧು ಎಂ. ಅವರಿಗೆ ಚೆನ್ನೈಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ವಿಶ್ವ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿದೆ.


ಸಂಪಾಜೆ ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿಯಾಗಿರುವ ಮೋಹನದಾಸ್ ಮುದ್ಯ ಹಾಗೂ ಸಂಪಾಜೆ ಪದವಿ ಪೂರ್ವ ಕಾಲೇಜಿ‌ನ ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ಮಾಲತಿ ದಂಪತಿಯ ಪುತ್ರಿಯಾಗಿರುವ ಶ್ರೀಮತಿ ಮಧು ಎಂ. ಅವರು ಮಂಡಿಸಿದ ಮುಟ್ಟಿನ ಸಮಯದಲ್ಲಿನ ಕಡಿಮೆ ರಕ್ತಸ್ರಾವ ಎಂಬ ಮಹಾಪ್ರಬಂಧಕ್ಕೆ ಚೆನ್ನೈಯಲ್ಲಿರುವ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ವಿಶ್ವ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ.


ಸಂಪಾಜೆಯಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಹಾಗೂ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪೂರ್ತಿಗೊಳಿಸಿದ ಅವರು ಹಾಸನದ ಎಸ್.ಡಿ.ಎಂ. ಕಾಲೇಜಿನಲ್ಲಿ ಬಿ.ಎಂ.ಎಸ್. ಪದವಿಯನ್ನು ಪೂರ್ತಿಗೊಳಿಸಿ, ಬೀದರಿನ ಎನ್.ಕೆ.ಜೆ. ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಎಂ.ಎಸ್.ಪ್ರಸೂತಿ ತಂತ್ರ
ಪದವಿ ಪಡೆದಿರುವ ಈಕೆ ಚೆನ್ನೈಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ವಿಶ್ವ ಮಹಾವಿದ್ಯಾಲಯದಲ್ಲಿ ಪಿ.ಎಚ್.ಡಿ. ಪದವಿ ಪಡೆದಿದ್ದಾರೆ.

ಶ್ರೀಮತಿ ಮಧು ಅವರು ವೈದ್ಯರಾಗಿರುವ ಡಾ. ಪ್ರಸನ್ನ ಅವರನ್ನು ವಿವಾಹವಾಗಿದ್ದು, ಪ್ರಸ್ತುತ ಹಾಸನದ ಎಸ್.ಡಿ.ಎಂ. ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.