ಸುಳ್ಯ ಸಿ ಎ ಬ್ಯಾಂಕ್‌ನ ಹಿರಿಯ ಗುಮಾಸ್ತೆ ಶ್ರೀಮತಿ ಜಲಜಾಕ್ಷಿ ಪಿ.ಕೆ ಯವರಿಗೆ ಬೀಳ್ಕೊಡುಗೆ

0

ಸುಳ್ಯ ಸಿ ಎ ಬ್ಯಾಂಕ್‌ ನಲ್ಲಿ ಕಳೆದ 29 ವರ್ಷಗಳಿಂದ ವಿವಿಧ ಹುದ್ದೆಗಳನ್ನು ನಿಭಾಯಿಸಿ ಹಿರಿಯ ಗುಮಾಸ್ಥೆಯಾಗಿ ಮೇ.31 ರಂದು ನಿವೃತ್ತರಾದ ಶ್ರೀಮತಿ ಜಲಜಾಕ್ಷಿ ಪಿ ಕೆ ಇವರಿಗೆ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಲಾಯಿತು. ಸಂಘದ ಅಧ್ಯಕ್ಷರಾದ ಬಾಲಗೋಪಾಲ ಎಂ ಉಪಸ್ಥಿತರಿದ್ದು ನಿವೃತ್ತರಿಗೆ ಶುಭ ಹಾರೈಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಎಸ್‌ ಪಿ ನಿರೂಪಿಸಿದರು. ಉಪಾಧ್ಯಕ್ಷರಾದ ಶೀನಪ್ಪ ಬಯಂಬು ವಂದನಾರ್ಪಣೆಗೈದರು. ಆಡಳಿತ ಮಂಡಳಿ ನಿರ್ದೇಶಕರು, ಸಿಬ್ಬಂದಿಗಳು, ಕಾನೂನು ಸಲಹೆಗಾರರು ಉಪಸ್ಥಿತರಿದ್ದರು.