ಸೋಣಂಗೇರಿ ಶಾಲಾ ಪ್ರಾರಂಭೋತ್ಸವ

0


ಸ.ಉ.ಹಿ.ಪ್ರಾ.ಶಾಲೆ ಸೋಣಂಗೇರಿಯ ಪ್ರಾರಂಭೋತ್ಸವವವು ಮೆ.೩೧ ರಂದು ನಡೆಯಿತು.
ಶಾಲಾ ಶಿಕ್ಷಕರು , ಎಸ್‌ಡಿಎಂಸಿ ಹಾಗೂ ಪೋಷಕರು ವಿದ್ಯಾರ್ಥಿಗಳನ್ನು ಶಾಲಾ ದ್ವಾರದ ಬಳಿ ಆರತಿ ಬೆಳಗಿ, ಹೊಮಳೆಗೈದು ಸಿಹಿತಿಂಡಿ ನೀಡಿ ಸ್ವಾಗತಿಸಿದರು.
ಬಳಿಕ ಎಸ್‌ಡಿಎಂಸಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಸಭೆಯಲ್ಲಿ ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯರಾದ ಶಿವಪ್ರಸಾದ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿರಂಜನ ಮಿತ್ತಮಜಲು, ನಿವೃತ್ತ ಶಿಕ್ಷಕರಾದ ಅರುಳಪ್ಪನ್, ಜಾಲ್ಸೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಭಾಸ್ಕರ ಹೊಸಗದ್ದೆ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಕುಸುಮಾವತಿ ಉಪಸ್ಥಿತರಿದ್ದರು.


ಹಾಗೂ ಎಸ್‌ಡಿಎಂಸಿ ಉಪಾಧ್ಯಕ್ಷರಾದ ಚಿದಾನಂದ , ಸದಸ್ಯರು, ಪೋಷಕರೊಂದಿಗೆ ಊರಿನ ವಿದ್ಯಾಭಿಮಾನಿಗಳಾದ ಗೋಪಾಲಕೃಷ್ಣ ಸುತ್ತುಕೋಟೆ, ಜೋಸೆಫ್ ಎನ್.ವಿ., ಗಿರಿಧರ ನಾಯರ್‌ಹಿತ್ಲು, ಶಾಂತಪ್ಪ ಗೌಡ, ಶೆಷಪ್ಪ ಪೂಜಾರಿ, ಅಂನವಾಡಿ ಕಾರ್ಯಕರ್ತೆಯರು ಮತ್ತು ಅಡುಗೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.


ಶಿಕ್ಷಕಿ ಶ್ರೀಮತಿ ಸವಿತಾ ಯು.ಆರ್ ಸ್ವಾಗತಿಸಿ, ಶ್ರೀಮತಿ ಜಯಲಕ್ಷಿö್ಮ ವಂದಿಸಿದರು. ಹಾಗೂ ಶ್ರೀಮತಿ ಸವಿತ ಎನ್.ಪಿ.ಕಾರ್ಯಕ್ರಮ ನಿರೂಪಿದರು.
ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತç ವಿತರಿಸಲಾಯಿತು. ಹೊಸತಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಡ್ರಾಯಿಂಗ್ ಪುಸ್ತಕ, ಕ್ರೆಯಾನ್ಸ್ ಹಾಗೂ ಪೌಚ್ ನೀಡಲಾಯಿತು.