ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ್ ಪಾನತ್ತಿಲ ನಿವೃತ್ತಿ

0

ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಶ್ರೀಧರ್ ಪಾನತ್ತಿಲ ಮೇ. 31ರಂದು ವಯೋ ನಿವೃತ್ತಿ ಹೊಂದಿದರು.
1963 ಜೂನ್ 1ರಂದು ಉಬರಡ್ಕ ಮಿತ್ತೂರು ಗ್ರಾಮದ ಪಾನತ್ತಿಲ ಹುಕ್ರಪ್ಪ ಗೌಡ ಮತ್ತು ಶ್ರೀಮತಿ ದೇವಮ್ಮ ದಂಪತಿಯ ಪುತ್ರರಾಗಿ ಜನಿಸಿದ ಡಾ. ಶ್ರೀಧರ್ ಪಾನತ್ತಿಲರವರು
ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಬರಡ್ಕ ಮಿತ್ತೂರುನಲ್ಲಿ ಪೂರೈಸಿ, ಪ್ರೌಢ ಮತ್ತು ಪದವಿಪೂರ್ವ ವಿದ್ಯಾಭ್ಯಾಸವನ್ನು ಸರಕಾರಿ ಜೂನಿಯರ್ ಕಾಲೇಜು ಸುಳ್ಯದಲ್ಲಿ ಪಡೆದರು.
ಬಳಿಕ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪೂರೈಸಿದರು. ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ., ಎಂ.ಫಿಲ್. ಹಾಗೂ ಸಮಾಜಶಾಸ್ತ್ರ ವಿಷಯದಲ್ಲಿ ಪಿ.ಹೆಚ್ ಡಿ. ಪದವಿ ಪಡೆದರು. ಬಳಿಕ ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ
ಅದ್ಯಾಪಕ ವೃತ್ತಿ ಆರಂಭಿಸಿದರು. ಬಳಿಕ ಮಂಗಳೂರು ವಿ.ವಿ. ಸಮಾಜಶಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸಿ 1996 ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಯಲಬುರ್ಗಾ ರಾಯಚೂರು ( ಕೊಪ್ಪಳ) ನಲ್ಲಿ ಅಧ್ಯಾಪಕರಾಗಿ ಸೇವೆ ಆರಂಭಿಸಿದರು. ನಂತರ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ, ಸ.ಪ್ರ.ದ. ಕಾಲೇಜು ನ್ಯಾಮತಿ, ಸ.ಪ್ರ. ಕಾಲೇಜು, ಹೊನ್ನಾಳಿ, ದಾವಣಗೆರೆ, ಸ.ಪ್ರ.ದ.ಕಾಲೇಜು ಪುತ್ತೂರಿನಲ್ಲಿ ಅಧ್ಯಾಪಕರಾಗಿ ಬಳಿಕ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ಅಂತಿಮವಾಗಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರಿನಲ್ಲಿ ‌ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಮೇ 31ಕ್ಕೆ ನಿವೃತ್ತಿ ಹೊಂದಿದರು.
ಇವರ ಪತ್ನಿ ಶ್ರೀಮತಿ ಪ್ರೀತ ಎಂ.ಎಸ್ಸಿ. ಬಿ.ಎಡ್. ಪದವೀಧರರಾಗಿದ್ದು, ಉಪ್ಪಿನಂಗಡಿ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿರಿಯ ಪುತ್ರಿ ಕು. ಅನುಷಾ ಪಿ.ಎಸ್ ಸುರತ್ಕಲ್ ನ ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಎಂ.ಬಿ.ಬಿಯಸ್ ವ್ಯಾಸಂಗ ಮಾಡುತ್ತಿದ್ದರೆ, ಕಿರಿಯ ಪುತ್ರಿ ಕು. ಆಶಿತಾ ಪಿ.ಎಸ್. ಹಾಸನ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಇಲ್ಲಿ ಎಂ.ಬಿ.ಬಿಯಸ್ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಸ್ತುತ ಇವರು ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ನೆಲಿಸಿದ್ದಾರೆ.