ಜಿಲ್ಲಾ ಪೌರರಕ್ಷಣಾ ಪಡೆಯ ಚೀಫ್ ವಾರ್ಡನ್ (ಮುಖ್ಯಪಾಲಕ) ಆಗಿ ಡಾ|| ಮುರಲೀ ಮೋಹನ ಚೂಂತಾರು ಮರುನೇಮಕ

0

ದಕ್ಷಿಣ ಕನ್ನಡ ಜಿಲ್ಲಾ  ಪೌರರಕ್ಷಣಾ ಪಡೆಯ ಚೀಫ್ ವಾರ್ಡನ್ (ಮುಖ್ಯಪಾಲಕ) ಆಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ ಚೂಂತಾರು ಅವರನ್ನು  ಮುಂದಿನ ಆದೇಶದ ವರೆಗೆ ನೇಮಕ ಮಾಡಿ ಆರಕ್ಷಕ ಮಹಾ ನಿರ್ದೇಶಕರು ಹಾಗೂ ಗೃಹರಕ್ಷಕ ದಳ ಮತ್ತು ಪೌರರಕ್ಷಣೆ ಇದರ ಮಹಾ ಸಮಾದೇಷ್ಟರು, ಕರ್ನಾಟಕ ರಾಜ್ಯ, ಬೆಂಗಳೂರು ಇವರು ಆದೇಶ ನೀಡಿರುತ್ತಾರೆ. 2020ನೇ ಇಸವಿಯಲ್ಲಿ ಇವರನ್ನು  ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಿದ್ದು, ಪುನಃ ಎರಡನೇ ಬಾರಿ   ಮುಂದಿನ ಆದೇಶದವರೆಗೆ ಆಯ್ಕೆ ಮಾಡಲಾಗಿದೆ ಎಂದು ಗೃಹರಕ್ಷಕದಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.