ಡಾ. ಆರ್. ಕೆ.‌ನಾಯರ್ ಅವರಿಗೆ ಜಾರ್ಜ್ ಫೆರ್ನಾಂಡೀಸ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

0

ಮುಂಬೈಯಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಪ್ರಶಸ್ತಿ

ಮುಂಬೈನ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಅಪೂರ್ವ ಸಾಧಕ, ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡೀಸ್ ಅವರ ಸಂಸ್ಮರಣಾರ್ಥ ನೀಡುವ ಪ್ರಶಸ್ತಿಯನ್ನು ನಿನ್ನೆ ಗ್ರೀನ್ ಹೀರೋ ಆಫ್ ಇಂಡಿಯಾ, ಮೂಲತಃ ಸುಳ್ಯದವರಾಗಿರುವ ಡಾ. ಆರ್ .ಕೆ ನಾಯರ್ ಅವರಿಗೆ ಪ್ರದಾನ ಮಾಡಲಾಯಿತು.

ಸಂಸದ ಗೋಪಾಲ ಶೆಟ್ಟಿ, ಮುಂಬೈಯ ಹಲವು ಜನಪ್ರತಿನಿಧಿಗಳು, ಗಣ್ಯರ ಜತೆ , ಜಿಲ್ಲೆಯ ವಿಧಾನ ಪರಿಷತ್ ಮಾಜಿ ಸದಸ್ಯರಾದ ಐವನ್ ಡಿಸೋಜ, ಗಣೇಶ್ ಕಾರ್ನಿಕ್, ಸಂಸ್ಥೆಯ ಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.‌ ಕಳ್ಳಿಗೆ ದಯಾ ಸಾಗರ್ ಚೌಟ ಅವರು ಡಾ. ಆರ್. ಕೆ. ನಾಯರ್ ಕುರಿತು ಅಭಿನಂದನಾ ನುಡಿಗಳನ್ನಾಡಿದರು.