ಸವಣೂರು ಸೀತಾರಾಮ ರೈಯವರಿಂದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ರವರಿಗೆ ಅಭಿನಂದನೆ

0


ನೂತನ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ರವರಿಗೆ ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ, ಸಹಕಾರಿ ರತ್ನ ಸವಣೂರು ಕೆ ಸೀತಾರಾಮ ರೈ ಯವರು ಅಭಿನಂದನೆ ಸಲ್ಲಿಸಿದರು. ಬೆಂಗಳೂರಿನ ಡಿ ಕೆ ಶಿವಕುಮಾರ್ ರವರ ನಿವಾಸಕ್ಕೆ ತೆರಳಿದ ಸೀತಾರಾಮ ರೈಯವರು ಶಾಲು ಹೊದಿಸಿ, ಹೂ ಗುಚ್ಛ ನೀಡುವ ಮೂಲಕ ಡಿ ಕೆ ಶಿವಕುಮಾರ್ ರವರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಲವು ಮಂದಿ ಉಪಸ್ಥಿತರಿದ್ದರು.