ಇಂದು ಆಲೆಟ್ಟಿ ಸದಾಶಿವ ದೇವಳದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವ-ಧಾರ್ಮಿಕ ಸಭೆ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಜೂ.5 ರಂದು ನಡೆಯಲಿರುವುದು. ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ನಿತ್ಯಪೂಜೆಯಾಗಿ ಗಣಪತಿ ಹವನ ಹಾಗೂ ವಿಶೇಷವಾಗಿ ಏಕದಶಾರುದ್ರಾಭಿಷೇಕ ನಡೆದು ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಈ ಸಂದರ್ಭದಲ್ಲಿ ಭಾರದ್ವಾಜ್ ಆಶ್ರಮದವರಿಂದ ವೇದ ಪಾರಾಯಣ ನಡೆಯಲಿದೆ. ಈ ಸಂದರ್ಭದಲ್ಲಿ ಧಾರ್ಮಿಕ ಸಭೆ ಮತ್ತು ಬೀಳ್ಕೊಡುಗೆ ಸಮಾರಂಭವು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವುದು. ಅನುವಂಶಿಕ ಮೊಕ್ತೇಸರ ಹೇಮಚಂದ್ರ ಬೈಪಡಿತ್ತಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಕೋಲ್ಚಾರು, ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದ ‌ಅಧ್ಯಕ್ಷ‌ ಅಶೋಕ ಪ್ರಭು‌ ಸುಳ್ಯ,ಜೀ.ಸ. ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ, ‌ಭಜನಾ ಸಂಘದ ಅಧ್ಯಕ್ಷ ಅಚ್ಚುತ ಮಣಿಯಾಣಿ ಆಲೆಟ್ಟಿ, ಉಳ್ಳಾಕುಲು ಜೀ.ಸ. ಆರ್ಥಿಕ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ,ವ್ಯ.ಸ.ಮಾಜಿ ಅಧ್ಯಕ್ಷ ‌ಕೆ.ಸಿ.ಪ್ರಸನ್ನ ‌ಬಡ್ಡಡ್ಕ ಉಪಸ್ಥಿತರಿರುವರು. ಸುಮಾರು 15 ವರ್ಷಗಳಿಂದ ದೇವಸ್ಥಾನದಲ್ಲಿ ‌ಸಹ ಅರ್ಚಕರಾಗಿ‌ ಸೇವೆ ಸಲ್ಲಿಸಿರುವ ಸುಬ್ರಾಯ ಭಟ್ ರವರಿಗೆ ಬೀಳ್ಕೋಡುಗೆ ಮತ್ತು ಸನ್ಮಾನ ‌ಕಾರ್ಯಕ್ರಮ‌ ನಡೆಯಲಿದೆ ಎಂದು ಸಮಿತಿಯ ‌ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ರವರು ‌ತಿಳಿಸಿದರು.