ಅಪಾಯಕಾರಿ ಸ್ಥಿತಿಯಲ್ಲಿ ಕಾಪಡ್ಕ ಮನೆ ನಿವೇಶನ ಪ್ರದೇಶ

0

ನಿಂತಿಕಲ್ ಸಮೀಪ ಕಲ್ಮಡ್ಕ ಗ್ರಾಮದ ಕಾಪಡ್ಕ ಎಂಬಲ್ಲಿ ಅತಿ ಎತ್ತರದ ಪ್ರದೇಶದಲ್ಲಿ ಮನೆ ನಿವೇಶನ ವಿತರಿಸಲಾಗಿದ್ದು, ಫಲಾನುಭವಿಗಳು ಮನೆ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ.

ಅತ್ಯಂತ ಕಡಿದಾದ ಪ್ರದೇಶದಲ್ಲಿ ಈ ನಿವೇಶನಗಳು ಇರುವುದರಿಂದ ಕಳೆದ ನಾಲ್ಕು ದಿನಗಳ ಹಿಂದೆ ಸುರಿದ ಮಳೆಗೆ ಸಮತಟ್ಟುಗೊಳಿಸಿ ವಿಸ್ತರಿಸಲಾದ ಮಣ್ಣು ಕೊಚ್ಚಿ ಹೋಗಿ ಒಂದು ಮನೆ ತೀರಾ ಅಪಾಯಕರ ಸ್ಥಿತಿಗೆ ಒಳಗಾಗಿತ್ತು. ಆ ಕಟ್ಟಡದ ಫಲಾನುಭವಿ ತಾನು ಕಟ್ಟಿಸಿದ ಗೋಡೆಯನ್ನು ತೆರವುಗೊಳಿಸಿದ್ದಾರೆ.


ಸಮತಟ್ಟುಗೊಳಿಸಿ ವಿಸ್ತರಿಸಿ ಹಾಕಿದ ಮಣ್ಣಿನಲ್ಲಿ ಗೋಡೆಕಟ್ಟ ಹೊರಟಿರುವುದು ಮತ್ತು ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಅಲ್ಲಿರುವ ಎಲ್ಲ ನಿವೇಶನಗಳ ಕಟ್ಟಡಗಳೂ ಅಪಾಯಕ್ಕೆ ಒಳಗಾಗಬಹುದಾಗಿದ್ದು ಸ್ಥಳೀಯ ಆಡಳಿತ ಮತ್ತು ತಾಲೂಕು ಆಡಳಿತ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳ ಬೇಕಾಗಿದೆ.