ಸುಳ್ಯ ಎನ್ನೆoಪಿಯುಸಿಯಲ್ಲಿ ವಿಶ್ವ ಪರಿಸರ ದಿನಾಚರಣೆ

0


ನಾವು ಪರಿಸರಕ್ಕೆ ಪೂರಕವಾದ ರೀತಿಯಲ್ಲಿ ಬದುಕಬೇಕು. ಭೂಮಿಯಲ್ಲಿ ತಾಪಮಾನ ಹೆಚ್ಚುತ್ತಿದ್ದು,ದಟ್ಟ ಕಾಡಿನಲ್ಲಿ ಗಿಡಗಳು ಸುಟ್ಟು ಹೋಗುತ್ತಿದೆ , ಪರಿಸರ ಕಾಳಜಿ ಪ್ರಾಯೋಗಿಕವಾಗಿ ಆಗಬೇಕಿದೆ.ಪ್ಲಾಸ್ಟಿಕ್ ನಿರ್ಮೂಲನೆಯಾಗಬೇಕು ಎಂದು ಸುಳ್ಯ ನೆಹರು ಮೆಮೋರಿಯಲ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ ಸಂಜೀವ ಕುದ್ಪಾಜೆ ಹೇಳಿದರು. ಅವರು ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಿಜ್ಞಾನ ವಿಭಾಗದ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.


ಅಭಿವೃದ್ಧಿಯ ನೆಪದಲ್ಲಿ ಪರಿಸರ ಹಾಳಾಗುತ್ತಿದೆ. ಶುದ್ಧ ಆಹಾರ, ಗಾಳಿ,ಪರಿಸರವನ್ನು ಶುಭ್ರವಾಗಿಟ್ಟು ಕಾಪಾಡಿ ಮುಂದಿನ ಜನಾಂಗಕ್ಕೆ ಬಿಟ್ಟು ಹೋಗುವ ನಿಟ್ಟಿನಲ್ಲಿ ಜಾಗೃತಿ ಅಗತ್ಯ ಎಂದು ಕಾಲೇಜಿನ ಪ್ರಾಚಾರ್ಯರಾದ ಹರಿಣಿ ಪುತ್ತೂರಾಯ ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ರೇಷ್ಮಾ ಎಂ ಎಂ, ಹರೀಶ ಸಿ,ವಿಜ್ಞಾನ ಸಂಘದ ಸಂಚಾಲಕಿ ರತ್ನಾವತಿ ಬಿ ಉಪಸ್ಥಿತರಿದ್ದರು .ದ್ವಿ ವಿಜ್ಞಾನ ವಿಭಾಗದ ಅಭಿಜ್ಞಾ,ಮೈತ್ರಿ ಪ್ರಾರ್ಥಿಸಿದರು.ವಿದ್ಯಾರ್ಥಿಗಳಾದ
ಅಕ್ಷಯ್ ರೈ, ಆಜ್ಞಾ ಐಪಾಲ್, ಪಿ.ಆರ್ ಸ್ಮಿತಾ ಅವರು ವಿಶ್ವ ಪರಿಸರ ದಿನದ ಬಗ್ಗೆ ಮಾತನಾಡಿದರು.
ವಿದ್ಯಾರ್ಥಿ ಅಭಿಷೇಕ್ ಎಂ, ಮತ್ತು ಅನನ್ಯ ಎ ಕಾರ್ಯಕ್ರಮ ನಿರ್ವಹಿಸಿದರು.ಪರಿಸರ ಸ್ನೇಹಿ ಮಾದರಿ, ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.