ಶ್ರೀಮತಿ ದೇಜಮ್ಮ ವೆಂಕಪ್ಪ ಗೌಡ ಮರ್ಲಾಣಿಯವರಿಗೆ ಶ್ರದ್ಧಾಂಜಲಿ – ವೈಕುಂಠ ಸಮಾರಾಧನೆ

0

ದೋಳ್ಪಾಡಿ ಗ್ರಾಮದ ಮರ್ಲಾಣಿ ದಿ.ವೆಂಕಪ್ಪ ಗೌಡ ಪತ್ನಿ ಶ್ರೀಮತಿ ದೇಜಮ್ಮ ರವರು ಮೇ. 18ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಜೂ.04 ರಂದು ಮರ್ಲಾಣಿ ಮನೆಯಲ್ಲಿ ನಡೆಯಿತು.


ನಿವೃತ್ತ ಶಿಕ್ಷಕ ಜನಾರ್ಧನ ಗೌಡ ಇಡ್ಯಡ್ಕ ರವರು ದಿ.ದೇಜಮ್ಮ ಮರ್ಲಾಣಿಯವರ ಆದರ್ಶ ಗುಣಗಳ ಬಗ್ಗೆ ಗುಣಗಾಣಗೈದು ಶ್ರದ್ಧಾಂಜಲಿ ಅರ್ಪಿಸಿದರು.
ಆಗಮಿಸಿದ ನೂರಾರು ಜನ ಗಣ್ಯರು ದಿ.ದೇಜಮ್ಮ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ
ಮೃತರ ಪುತ್ರರಾದ ರಾಜೇಶ್ ಮರ್ಲಾಣಿ, ಹರೀಶ್ ಮರ್ಲಾಣಿ, ಉಮೇಶ್ ಮರ್ಲಾಣಿ, ಸತೀಶ್ ಮರ್ಲಾಣಿ, ಪುತ್ರಿಯರಾದ ಶ್ರೀಮತಿ ಪ್ರೇಮಾ ಕುಶಾಲಪ್ಪ ಮುಂಡ್ರಾಜೆ ಚೊಕ್ಕಾಡಿ, ಶ್ರೀಮತಿ ಲಲಿತಾ ಗಿರಿಯಪ್ಪ ಗೌಡ ಬಾನಡ್ಕ, ಶ್ರೀಮತಿ ಗುಲಾಬಿ ಬೆಂಗಳೂರು, ಶ್ರೀಮತಿ ಮೋಹಿನಿ ಲೋಕನಾಥ ಕುದ್ವ, ಸೊಸೆಯಂದಿರಾದ ಶ್ರೀಮತಿ ದಿವ್ಯ ರಾಜೇಶ್, ಶ್ರೀಮತಿ ಲತಾ ಹರೀಶ್, ಶ್ರೀಮತಿ ಶೋಭಾ ಉಮೇಶ್, ಶ್ರೀಮತಿ ಸುಪ್ರಿಯಾ ಸತೀಶ್ ಅಳಿಯಂದಿರಾದ ಕುಶಾಲಪ್ಪ ಗೌಡ ಮುಂಡ್ರಾಜೆ ಚೊಕ್ಕಾಡಿ , ಗಿರಿಯಪ್ಪ ಗೌಡ ಬಾನಡ್ಕ, ಲೋಕನಾಥ ಗೌಡ ಕುದ್ವ, ಮೊಮ್ಮಕ್ಕಳು, ಮರಿಮಗಳು, ಕುಟುಂಬಸ್ಥರು ಉಪಸ್ಥಿತರಿದ್ದರು.