ಮುರುಳ್ಯ ಸ ಉ. ಹಿ.ಪ್ರಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಸ ಉ. ಹಿ.ಪ್ರಾ ಶಾಲೆ ಮುರುಳ್ಯದಲ್ಲಿ ಜೂನ್ 5 ರಂದು ವಿಶ್ವಪರಿಸರ ದಿನ ಆಚರಿಸಲಾಯಿತು. ಪ್ರಾರ್ಥನಾ ಅವಧಿಯಲ್ಲಿ ಮಕ್ಕಳು ಪರಿಸರಕ್ಕೆ ಸಂಬಂಧಿಸಿದ ರಸಪ್ರಶ್ನೆ ಕೇಳಿದರು , ಭಾಷಣ ಮಾಡಿದರು. ಮುಖ್ಯಶಿಕ್ಷಕರು ಮಕ್ಕಳಿಗೆ ಪರಿಸರ ರಕ್ಷಣೆ ಕುರಿತಾದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಪರಿಸರ ಘೋಷಣೆ ಹೇಳಿಸಲಾಯಿತು. ಪರಿಸರ ಎಂದರೇನು? ಪರಿಸರವು ಒಳಗೊಂಡಿರುವ ಸೂರ್ಯ, ಭೂಮಿ ನೀರು, ಜೀವಸಂಕುಲದ ರಕ್ಷಣೆ ಮತ್ತು ಬಳಕೆ, ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಮಕ್ಕಳು ಮಾಡಬಹುದಾದ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಸ್ಕೌಟ್ಸ್, ಗೈಡ್ಸ್, ಕಬ್, ಬುಲ್ ಬುಲ್’ ಹಾಗೂ ಇತರ ಮಕ್ಕಳು, ಶಿಕ್ಷಕರು, ಪೋಷಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here