ಪಂಜ: ಶಾಸಕಿ ಕು.ಭಾಗೀರಥಿ ಮುರುಳ್ಯ ರವರಿಗೆ ಅಭಿನಂದನಾ ಸಮಾರಂಭ

0

ಮುಂದಿನ ಚುನಾವಣೆಗಳಲ್ಲೂ ಗೆಲುವು ನಮ್ಮದಾಗ ಬೇಕು : ಡಾ.ರಾಮಯ್ಯ ಭಟ್

ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ: ಹರೀಶ್ ಕಂಜಿಪಿಲಿ

ಶಾಸಕಿ ಕು. ಭಾಗೀರಥಿ ಮುರುಳ್ಯರವರಿಂದ ಉತ್ತಮ ಕಾರ್ಯ ಆಗುವ ವಿಶ್ವಾಸವಿದೆ:ರಾಕೇಶ್ ರೈ ಕೆಡೆಂಜಿ

ಸಮೃದ್ದ ರಾಷ್ಟ್ರ ನಿರ್ಮಾಣಕ್ಕೆ ಕಟ್ಟಿದ ಪಕ್ಷ ಬಿಜೆಪಿ: ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯ ವಿಧಾನ ಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಕು.ಭಾಗೀರಥಿ ಮುರುಳ್ಯ ರವರಿಗೆ ಐವತ್ತೊಕ್ಲು ಮತ್ತು ಕೂತ್ಕುಂಜ ಗ್ರಾಮಗಳನ್ನೊಳಗೊಂಡ ಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರು ಮತ್ತು ಮತದಾರರಿಂದ ಅಭಿನಂದನಾ ಕಾರ್ಯಕ್ರಮ ಜೂ.5 ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆಯಿತು.

ಹಿರಿಯ ವೈದ್ಯ ,ಪಂಜ ಗ್ರಾಮ ಪಂಚಾಯತ್ ಪೂರ್ವಾಧ್ಯಕ್ಷ ಡಾ.ರಾಮಯ್ಯ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
“ಮುಂದಿನ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ಲೋಕ ಸಭಾ ಚುನಾವಣೆಯಲ್ಲಿ ಉತ್ತಮ ಗೆಲುವು ನಮ್ಮದಾಗ ಬೇಕು” ಎಂದು ಹೇಳಿದರು.


ಭಾಜಪ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ “ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಆಗಿದೆ. ಮುಂದೆ ಕ್ಷೇತ್ರದಲ್ಲಿ ಆಗ ಬೇಕಾದ ಅಗತ್ಯ ಕೆಲಸಗಳನ್ನು ಮತ್ತು ಬಾಕಿ ಆಗಿರುವ ಕೆಲಸಗಳನ್ನು ಕಾರ್ಯಕರ್ತರು, ಜನಪ್ರತಿನಿಧಿಗಳು ಸೇರಿ ಪೂರೈಸುವ ಕಾರ್ಯಗಳು ಆಗ ಬೇಕು” ಎಂದು ಅವರು ಹೇಳಿದರು.

ಭಾಜಪ ಸುಳ್ಯ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಮಾತನಾಡಿ “ಎಲ್ಲಾ ಕಾರ್ಯಕರ್ತರ ಕಠಿಣ ಪರಿಶ್ರಮದ ಫಲವಾಗಿ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಕು.ಭಾಗೀರಥಿ ಮುರುಳ್ಯ ರವರು ಅತೀ ಹೆಚ್ಚು ಅಂತರದಿಂದ ಗೆಲುವು ಸಾಧಿಸಿದ್ದಾರೆ.ಅವರು ಒಬ್ಬ ಸಾಮಾನ್ಯ ಕಾರ್ಯಕರ್ತೆಯಾಗಿ ಬೆಳೆದು ಬಂದವರು. ಆದರಿಂದ ಅವರಿಗೆ ಎಲ್ಲಾ ಹಂತಗಳ ಅನುಭವಗಳು ಇದೆ. ಆದರಿಂದ ಕಾರ್ಯಕರ್ತರಿಗೆ, ಎಲ್ಲರಿಗಾಗಿ ನ್ಯಾಯಯುತ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ”. ಎಂದು ಶುಭ ಹಾರೈಸಿದರು.


ಅಭಿನಂದನೆ ಸ್ವೀಕರಿಸಿ ಶಾಸಕಿ ಕು. ಭಾಗೀರಥಿ ಮುರುಳ್ಯ ಮಾತನಾಡಿ “ವ್ಯಕ್ತಿಗಿಂತ ಪಕ್ಷ ಮುಖ್ಯ,ಪಕ್ಷಗಿಂತ ದೇಶ ಮುಖ್ಯ ಎಂದು ಬೆಳೆದು ಬಂದ ಪಕ್ಷ ನಮ್ಮದು. ಅಧಿಕಾರಕ್ಕಾಗಿ ಕಟ್ಟಿದ ಪಕ್ಷ ನಮ್ಮದಲ್ಲ.ನಮ್ಮ ದೇಶದ ಸಂಸ್ಕಾರ ಸಂಸ್ಕೃತಿ ಉಳಿಸಿ ದೇಶವನ್ನು ಸಮೃದ್ದ ರಾಷ್ಟ್ರವಾಗಿ ಮಾಡಲು ಪರಿವಾರ ಸಂಘಟನೆಗಳು ಕಟ್ಟಿದ ಪಕ್ಷ ನಮ್ಮದು. ಕಾರ್ಯಕರ್ತರ ಪಕ್ಷ ನಿಷ್ಠೆ,ಪರಿಶ್ರಮದಿಂದ ಜನರ ಮನಮುಟ್ಟುವ ರೀತಿ ಕೆಲಸ ಮಾಡಿದ ಫಲವಾಗಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದೇವೆ.ಅದಕ್ಕಾಗಿ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಭಿನಂದನೆಗಳು” ಎಂದು ಅವರು ಹೇಳಿದರು.


ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ, ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚನಿಯಪ್ಪ ಗೌಡ ಕುಳ್ಳಕೋಡಿ, ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಭಾಜಪ ಸುಳ್ಯ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಗ್ರಾಮ ಪಂಚಾಯತ್ ಪಂಜ,ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಶಾಸಕಿ ಕು.ಭಾಗೀರಥಿ ಮುರುಳ್ಯ ರವರನ್ನು ಅಭಿನಂದಿಸಲಾಯಿತು.


ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ನಿರ್ದೇಶಕ ಸಂಘದ ಚಂದ್ರಶೇಖರ ಶಾಸ್ತ್ರಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಪೂರ್ಣಿಮಾ ದೇರಾಜೆ ಸ್ವಾಗತಿಸಿದರು.ಜಯರಾಮ‌ ಕಲ್ಲಾಜೆ ನಿರೂಪಿಸಿದರು.ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಲಿಗೋಧರ ಆಚಾರ್ಯ ವಂದಿಸಿದರು.