ಸ್ನೇಹ ಶಿಕ್ಷಣ ಸಂಸ್ಥೆಗೆ ಗುಜರಾತಿನ ಸ್ಮೃತಿವನ ಪ್ರಶಸ್ತಿ

0

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜೂ. 5 ರಂದು ಗುಜರಾತಿನ ಕಛ್ ಜಿಲ್ಲಾಡಳಿತವು ನಡೆಸಿದ ಕಾರ್ಯಕ್ರಮದಲ್ಲಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗೆ ಜಿಲ್ಲಾಧಿಕಾರಿ ಅಮಿತ್ ಅರೋರಾ ಅವರು ಸ್ಮೃತಿವನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಸ್ನೇಹ ಶಾಲಾ ಆವರಣದಲ್ಲಿ ಸಂರಕ್ಷಿಸಿದ ಸಸ್ಯ ವೈವಿಧ್ಯ ಹಾಗೂ ಜಲ ಸಂರಕ್ಷಣಾ ಕಾರ್ಯಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಇದಲ್ಲದೆ ಶ್ವೇತ ಪಡೆಯ ಮೂಲಕ ನಡೆಸಿದ ಸಾರ್ವಜನಿಕ ಸ್ಥಳಗಳ ಸ್ವಚ್ಚತಾ ಕಾರ್ಯಗಳನ್ನು ಗುರುತಿಸಿದ್ದಾರೆ.

ಸಂಸ್ಥೆಯ ಅಧ್ಯಕ್ಷ ರಾದ ಡಾ. ಚಂದ್ರಶೇಖರ ದಾಮ್ಲೆ, ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಹಾಗೂ ಶ್ವೇತ ಪಡೆಯ ಪ್ರತಿನಿಧಿಗಳಾಗಿ ಶಾಲಾ ವಿದ್ಯಾರ್ಥಿಗಳಾದ ಜ್ಞಾನವಿ ಪಿ. ಜೆ. ಮತ್ತು ಅರುಣ ಪ್ರಭು ಇವರು ಸ್ಮೃತಿವನದ ಮ್ಯೂಸಿಯಂನ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪಡೆದರು.‌

ಈ ಸಂದರ್ಭದಲ್ಲಿ ಸ್ಮೃತಿವನದ ರೂವಾರಿ ಡಾ. ಆರ್. ಕೆ. ನಾಯರ್ ಉಪಸ್ಥಿತರಿದ್ದರು.