ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಗೌರಿತಾ ಕೆ.ಜಿ. ವಿಶ್ವ ದಾಖಲೆ

0

ಕುಮಾರಸ್ವಾಮಿ ವಿದ್ಯಾಲಯದ ಗೌರಿತಾ ಕೆ. ಜಿ ದೀರ್ಘ ಸಮಯ ಬದ್ಧ ಕೋನಾಸನದಲ್ಲಿ ಇರುವ ಮೂಲಕ ವಿಶ್ವ ದಾಖಲೆಯನ್ನು ಸಾಧಿಸಿದ್ದಾಳೆ.

ಬದ್ಧ ಕೋನಾಸನದಲ್ಲಿ ನಿರಂತರ 45 ನಿಮಿಷ 15 ಸೆಕೆಂಡುಗಳ ಕಾಲ ಇರುವ ಮೂಲಕ ಕಲಾಂ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾಳೆ. ಕುಮಾರಸ್ವಾಮಿ ವಿದ್ಯಾಲಯದ ಮೂರನೆಯ ತರಗತಿ ವಿದ್ಯಾರ್ಥಿನಿಯಾಗಿರುವ ಗೌರಿತಾ ಕೆ. ಜಿ ಯೋಗ ಗುರು ಶರತ್ ಮರ್ಗಿಲಡ್ಕರವರ ಶಿಷ್ಯೆ. ಈಕೆ ಸಂಪಾಜೆ ಕಳಗಿ ಡಾ. ಗೌತಮ್ ಮತ್ತು ಡಾ. ರಾಜೇಶ್ವರಿ ಅವರ ಪುತ್ರಿ.