ಕಲ್ಮಡ್ಕ ದಲ್ಲಿ ಕೊಚ್ಚಿ ಹೋದ ಮನೆ ನಿವೇಶನ ಜಾಗ: ಸ್ಥಳಕ್ಕೆ ಶಾಸಕರ ಭೇಟಿ

0

ಕಲ್ಮಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ನಿವೇಶನದ ಜಾಗದ ಕೆಲವು ಭಾಗ ಮೊದಲ ಮಳೆಗೆ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಸಮಸ್ಯೆಯಾಗಿದ್ದು, ಈ ಕುರಿತು ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಸುದ್ದಿ ಚಾನೆಲ್ ವರದಿ ಪ್ರಸಾರ ಮಾಡಿತ್ತು.

ಇಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ವಸಂತ ನಡುಬೈಲು, ಶ್ರೀನಾಥ್ ರೈ ಬಾಳಿಲ, ಮಹೇಶ್ ರೈ ಮೇನಾಲ, ರಮೇಶ್ ಕುರಿಯ, ಜಯರಾಜ್ ನಡ್ಕ ಈ ಸಂದರ್ಭದಲ್ಲಿದ್ದರು.

ಫಲಾನುಭವಿಗಳಾದ ಗಣೇಶ್, ನಾರಾಯಣ, ಸತೀಶ್ ಅವರೊಂದಿಗೆ ಶಾಸಕರು ಮಾತುಕತೆ ನಡೆಸಿದರು.