ಶ್ರೀಮತಿ ವಿದ್ಯಾ ಹರೀಶ್ ಅವರಿಗೆ ಮಾಸ್ಟರ್ಸ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಬೆಳ್ಳಿಪದಕ

0

ಪೆರಾಜೆ ಗ್ರಾಮದ ಬಂಗಾರಕೋಡಿಯ ಶ್ರೀಮತಿ ವಿದ್ಯಾ ಹರೀಶ್ ಅವರಿಗೆ ಮಾಸ್ಟರ್ಸ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಬೆಳ್ಳಿಪದಕ ದೊರೆತಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಜೂ.4ರಂದು ಜರುಗಿದ ಮಾಸ್ಟರ್ಸ್ ಮ್ಯಾರಥಾನ್‌ನ ಐದು ಕಿ.ಮೀ. ಓಟದ ಸ್ಪರ್ಧೆಯಲ್ಲಿ ಶ್ರೀಮತಿ ವಿದ್ಯಾ ಹರೀಶ್ ಅವರು ಐದು ಕಿ. ಮೀ. ಓಟವನ್ನು 32 ನಿಮಿಷ 52 ಸೆಕೆಂಡುಗಳಲ್ಲಿ ಓಡಿ ಪೂರ್ತಿಗೊಳಿಸಿ, ಬೆಳ್ಳಿಪದಕ ಹಾಗೂ ನಗದು ಬಹುಮಾನವನ್ನು ಪಡೆದುಕೊಂಡಿದ್ದಾರೆ. ಈಕೆ ಆಲೆಟ್ಟಿ ಗ್ರಾಮದ ರಂಗತ್ತಮಲೆಯ ಆರ್. ಕೂಸಪ್ಪ ಗೌಡ ಹಾಗೂ ಶ್ರೀಮತಿ ಸಣ್ಣಮ್ಮ ದಂಪತಿಗಳ ಪುತ್ರಿ.