ಕಲ್ಮಡ್ಕ : ಶ್ರೀರಾಮ ಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ನಾಮ ಸಂಕೀರ್ತನಾ ಕಾರ್ಯಕ್ರಮ

0

ಕಲ್ಮಡ್ಕ ಶ್ರೀರಾಮ ಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ,ಆಹ್ವಾನಿತ ಭಜನಾ ತಂಡಗಳಿಂದ ನಾಮ ಸಂಕೀರ್ತನಾ ಕಾರ್ಯಕ್ರಮಜೂ. 4 ರಂದು
ನಡೆಯಿತು.

ಶ್ರೀರಾಮ ಮಂದಿರದ ಅಧ್ಯಕ್ಷ ಗೋವಿಂದಯ್ಯ . ಜೆ. , ಶಿವರಾಮ ಭಟ್ .ಬಿ. ದೀಪ ಬೆಳಗಿಸಿ ಕಾರ್ಯಕ್ರಮ ಶುಭಾರಂಭ ಗೊಳಿಸಿದರು.


ಸಮರ್ಪಣಾ ಭಜನಾ ಮಂಡಳಿ ಕುಕ್ಕುಜಡ್ಕ, ಶ್ರೀ ದೇವಿ ಭಜನಾ ಮಂಡಳಿ ಚೊಕ್ಕಾಡಿ, ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಕೇನ್ಯ, ಸಿದ್ಧಿವಿನಾಯಕ ಭಜನಾ ಮಂಡಳಿ ಬೀದಿಗುಡ್ಡೆ, ಮಹಾಲಿಂಗೇಶ್ವರ ಭಜನಾ ಮಂಡಳಿ ಅಜಪಿಲ, ಬೆಳ್ಳಾರೆ, ಮಂಜುನಾಥ ಭಜನಾ ಮಂಡಳಿ ಕೋಟೆ ಮುಂಡುಗಾರು, ಧರ್ಮ ಶಾಸ್ತ ಭಜನಾ ಮಂಡಳಿ, ಪಿಲಿಕಜೆ, ಶ್ರೀ ಗಣೇಶ ವೀರ ವಿಠಲ ಭಜನಾ ಮಂಡಳಿ, ವಾಮದಪದವು ಬಂಟ್ವಾಳ , ಶ್ರೀರಾಮ ಭಜನಾ ಮಂಡಳಿ ಕಲ್ಮಡ್ಕ, ತಂಡದ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಶ್ರೀರಾಮ ಭಜನಾ ಮಂಡಳಿಯ ಸದಸ್ಯರು ಕಾರ್ಯಕ್ರಮ ಸಂಯೋಜಿಸಿದರು. ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ನಿರೂಪಿಸಿದರು.