ಸರಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ನಾಳೆ ಮಧ್ಯಾಹ್ನ ಸುಳ್ಯದಲ್ಲಿ ಚಾಲನೆ

0


ಕರ್ನಾಟಕದ ನೂತನ ಸರಕಾರವು ಘೋಷಿಸಿರುವ ಕೆಎಸ್‌ಆರ್‌ಟಿಸಿ ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ನಾಳೆ ಮಧ್ಯಾಹ್ನ ಸುಳ್ಯ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.


ನಾಳೆ ಮಧ್ಯಾಹ್ನ 12.3೦ಕ್ಕೆ ಸುಳ್ಯ ಬಸ್ ನಿಲ್ದಾಣದ ಆವರಣದಲಲ್ಲಿ ಶಾಸಕಿ ಭಾಗೀರಥಿ ಮುರುಳ್ಯರವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಈ ಯೋಜನೆಯನ್ನು ಆರಂಭಿಸಲಾಗುವುದು. ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ತಹಶೀಲ್ದಾರ್‌ರವರು ವೇದಿಕೆಯಲ್ಲಿ ಇರಲಿದ್ದಾರೆ. ಸಾರ್ವಜನಿಕರು ಮತ್ತು ಬಸ್ ಪ್ರಯಾಣಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದೆ ಎಂದು ಡಿಪ್ಪೋ ಮೆನೇಜರ್ ವಸಂತಕುಮಾರ್ ತಿಳಿಸಿದ್ದಾರೆ.