ಸುಳ್ಯದಲ್ಲಿ ಶಾಸ್ತ್ರೀಯ ಭರತನಾಟ್ಯ ತರಗತಿ ಶುಭಾರಂಭ

0

ಸುಳ್ಯದ ಸಿ.ಎ.ಬ್ಯಾಂಕ್ ಸಭಾಭವನದಲ್ಲಿ ಕಲಾ ತಪಸ್ವಿ,ನಾಟ್ಯ ಕಲಾ ಸಿಂಧು, ನಾಟ್ಯ ನಿಲಯಂ ಗುರು ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಇವರ ಶಿಷ್ಯೆ ಕು.ಸಿಂಧು ಪ್ರಭು ರವರ ಶಾಸ್ತ್ರೀಯ ಭರತ ನಾಟ್ಯ ತರಗತಿಯು ಜೂ.9 ರಂದು ಶುಭಾರಂಭಗೊಂಡಿತು.


ಗುರುಗಳಾದ ಬಾಲಕೃಷ್ಣ ಮಾಸ್ತರ್ ರವರು ನೃತ್ಯಾಧಿಪತಿ ನಟರಾಜ ಹಾಗೂ ವಿಘ್ನವಿನಾಶಕ ಗಣಪತಿಯನ್ನು ಪೂಜಿಸಿ ದೀಪ ಪ್ರಜ್ವಲಿಸಿ ಶುಭಾಶೀರ್ವದಿಸಿದರು. ಅಧ್ಯಕ್ಷತೆ ವಹಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ರವರು ಮಾತನಾಡಿ “ಇಂತಹ ಕಲಾ ಕೇಂದ್ರಗಳನ್ನು ಬೆಳೆಸುವ ನಿಟ್ಟಿನಲ್ಲಿ ಸರಕಾರದ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರೋತ್ಸಾಹ ನೀಡುವಂತಾಗಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.


ಮುಖ್ಯ ಅಭ್ಯಾಗತರಾಗಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ಮಾತನಾಡಿ ” ಭಾರತದ ಸಂಸ್ಕೃತಿಯನ್ನು ಬಿಂಬಿಸುವ ಭರತನಾಟ್ಯ ದಂತಹ ಅದ್ಭುತ ಕಲಾ ಪ್ರಕಾರವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವು ಇಂತಹ ಕಲಾ ಕೇಂದ್ರದ ಮೂಲಕ ನೆರವೇರಲಿ ಎಂದು ಶುಭ ಹಾರೈಸಿದರು.
ಸುಳ್ಯ ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ಶೀನಪ್ಪ ಬಯಂಬು, ಸರಸ್ವತಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕ ಹೇಮಂತ್ ಕುಮಾರ್ ಕಂದಡ್ಕ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ನಾಟ್ಯ ಗುರು ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ರವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಶಾಸಕಿ ಕು.ಭಾಗೀರಥಿ ಮುರುಳ್ಯ ರವರನ್ನು ಶ್ರೀಮತಿ ಯಶೋಧ ವಾಸುದೇವ ಪ್ರಭು ರವರು ಸನ್ಮಾನಿಸಿದರು. ಕಾರ್ಯಕ್ರಮವನ್ನು
ಕು.ಅಮೃತಾಂಬ ರವರ ವೇದಮಂತ್ರ ಪಠಣದೊಂದಿಗೆ ಪ್ರಾರಂಭಿಸಲಾಯಿತು.

ಭರತನಾಟ್ಯ ಶಿಕ್ಷಕಿ ಕು.ಸಿಂಧು ಪ್ರಭು ಸ್ವಾಗತಿಸಿದರು. ಸಂತೋಷ್ ಕೊಡಿಯಾಲ ವಂದಿಸಿದರು. ಮೂಲಚಂದ್ರ ಕಾಂಚನ ಕಾರ್ಯಕ್ರಮ ನಿರೂಪಿಸಿದರು.