ಅರಂತೋಡು: ಕುಲ್ಚಾರು ಬಳಿ ಸೈಡ್ ಕೊಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ

0

ಕಾರಿನಲ್ಲಿದ್ದ ವ್ಯಕ್ತಿಯಿಂದ ಲಾರಿ ಚಾಲಕನಿಗೆ ಥಳಿತ

ಮುಂಭಾಗದಿಂದ ಬರುತ್ತಿದ್ದ ಕಾರೊಂದಕ್ಕೆ ಸೈಡ್ ಕೊಡುವ ವೇಳೆ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಸರಿದ ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕನಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವ ಥಳಿಸಿದ ಘಟನೆ ಅರಂತೋಡು ಗ್ರಾಮದ ಕುಲ್ಚಾರಿನಲ್ಲಿ ಸಂಭವಿಸಿದೆ.

ಕುಶಾಲನಗರದಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಕುಲ್ಚಾರು ತಿರುವಿನ ಬಳಿ ಮುಂಭಾದಿಂದ ಬರುತ್ತಿದ್ದ ಕಾರಿಗೆ ಸೈಡ್ ಕೊಡವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡಾಮಾರು ರಸ್ತೆ ಬಿಟ್ಟು, ಪಕ್ಕಕ್ಕೆ ಸರಿದು, ಕಲ್ಲೊಂದರ ಮೇಲೆ ಹತ್ತಿ ನಿಂತಿತೆನ್ನಲಾಗಿದೆ. ಕಲ್ಲು ಇದ್ದ ಕಾರಣ ಲಾರಿ ದೊಡ್ಡ ಕಮರಿಗೆ ಬೀಳುವುದು ತಪ್ಪಿದೆ.


ಈ ಘಟನೆಗೆ ಸಂಬಂಧಿಸಿದಂತೆ ಕಾರು ಹಾಗೂ ಲಾರಿ ಚಾಲಕನ ಮಧ್ಯೆ ಮಾತುಕತೆ ನಡೆಯುತ್ತಿದ್ದ ವೇಳೆ ಕಾರಿನಲ್ಲಿದ್ದ ವ್ಯಕ್ತಿಯೋರ್ವರು ಲಾರಿ ಚಾಲಕನಿಗೆ ಚಾಲಕ ತಿಳಿದುಬಂದಿದೆ.