ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜು : ಪ್ರೌಢಶಾಲಾ ಮಂತ್ರಿಮಂಡಲ ರಚನೆ

0

ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮಂತ್ರಿ ಮಂಡಲ ರಚನೆ ಇತ್ತೀಚೆಗೆ ನಡೆಯಿತು.


2023 – 24ನೇ ಸಾಲಿನ ಶಾಲಾ ನಾಯಕನಾಗಿ 10ನೇ ತರಗತಿಯ ಸೋಹನ್ ಎಸ್. ಎಂ. ಮತ್ತು ಉಪ ನಾಯಕಿಯಾಗಿ 10ನೇ ತರಗತಿಯ ಯಕ್ಷಿತಾ ಬಿ. ಎನ್. ಆಯ್ಕೆ ಯಾಗಿರುತ್ತಾರೆ. ಇವರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು. ಹಾಗೂ ಗೃಹ ಮಂತ್ರಿಯಾಗಿ ಭವಿತ್ ಪಿ. ಬಿ., ಶಿಸ್ತು -ಸಿಂಚನಾ, ವಿದ್ಯಾ-ದಿಯಾ, ಆಹಾರ-ಅನ್ವಿತ್, ಆರೋಗ್ಯ-ಯಕ್ಷಿತಾ ಯು, ಸ್ವಚ್ಛತಾ-ಹರ್ಷನ್, ಸಾಂಸ್ಕೃತಿಕ-ಗಾಯನ, ಕ್ರೀಡಾ-ಧನುಷ್, ನೀರಾವರಿ-ಪ್ರಬಿನ್ ಹೀಗೆ ವಿವಿಧ ಮಂತ್ರಿಗಳನ್ನು ಆಯ್ಕೆ ಮಾಡಲಾಯಿತು.