ನಿವೃತ್ತ ಬ್ಯಾಂಕ್ ಅಧಿಕಾರಿ ಸುಬ್ರಹ್ಮಣ್ಯ ಶಾಸ್ತ್ರಿ ವಿಧಿವಶ

0

ಸುಳ್ಯದ ಸ್ಟೇಟ್ ಬ್ಯಾಂಕ್ ನಲ್ಲಿ ಹಲವಾರು ವರ್ಷ ಅಧಿಕಾರಿಯಾಗಿದ್ದು, ನಾಲ್ಕು ವರ್ಷಗಳ ಹಿಂದೆ ನಿವೃತ್ತರಾಗಿದ್ದ ಗುತ್ತಿಗಾರು ನಿವಾಸಿ ಸುಬ್ರಹ್ಮಣ್ಯ ಶಾಸ್ತ್ರಿಯವರು ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.


ಸುಮಾರು 35 ವರ್ಷಕ್ಕೂ ಹೆಚ್ಚು ಸಮಯ ಸ್ಟೇಟ್ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸುಬ್ರಹ್ಮಣ್ಯ ಶಾಸ್ತ್ರಿಯವರು ನಿವೃತ್ತರಾದ ಬಳಿಕ ಅತ್ಯಂತ ಚಟುವಟಿಕೆಯಲ್ಲಿದ್ದರು. ಎಲ್ಲಾ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದರು.

ನಿನ್ನೆ ಕೂಡ ಮಧ್ಯಾಹ್ನ ಶ್ರಾದ್ಧ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಹೋಗಿ, ಅಲಂಕಾರಿನಲ್ಲಿರುವ ತನ್ನ ಸಹೋದರಿಯ ಮನೆಯಿಂದ ಗಿಡ ತರಲೆಂದು ಅಲ್ಲಿಗೆ ತನ್ನ ಒಮ್ನಿ ವಾಹನದಲ್ಲಿ ಹೋಗಿದ್ದರು. ಅಲ್ಲಿ ಎಲ್ಲರೊಂದಿಗೆ ಬೆರೆತು ಮಾತನಾಡಿ, ಗಿಡಗಳನ್ನು ಓಮ್ನಿಯಲ್ಲಿ ಇರಿಸಿದ ಬಳಿಕ ಇನ್ನು ಹೊರಡುತ್ತೇನೆ ಎಂದು ಹೇಳಿ ರಾತ್ರಿ 7.30 ರ ಸುಮಾರಿಗೆ ಮನೆಯೊಳಗೆ ಬಂದು ದಣಿವಾರಿಸಿಕೊಳ್ಳಲೆಂದು ಸೋಫದಲ್ಲಿ ಕುಳಿತು ಮನೆಯವರೊಂದಿಗೆ ಮಾತನಾಡುತ್ತಿರುವಾಗಲೇ ಕುಸಿದರು.

ಮನೆಯವರು ಕೂಡಲೇ ಅವರನ್ನು ಹಿಡಿದುಕೊಂಡು ವೈದ್ಯರಲ್ಲಿಗೆ ಕರೆದೊಯ್ದು ಪರೀಕ್ಷಿಸಿದಾಗ ಪ್ರಾಣಪಕ್ಷಿ ಹಾರಿಹೋಗಿತ್ತೆಂದು ತಿಳಿದುಬಂದಿದೆ.


ಮೃತದೇಹವನ್ನು ಗುತ್ತಿಗಾರಿನ ಅವರ ಮನೆಗೆ ತರಲಾಗಿದೆ. ಇಂದು ಬೆಳಿಗ್ಗೆ ಅಂತ್ಯಸಂಸ್ಕಾರ ನಡೆಯಲಿದೆ.