ಕೊಲ್ಲಮೊಗ್ರು: ಬಂಗ್ಲೆಗುಡ್ಡೆ ಶಾಲಾ ಮಂತ್ರಿಮಂಡಲ ರಚನೆ

0

ಕೊಲ್ಲಮೊಗ್ರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ ಕೊಲ್ಲಮೊಗ್ರು ಇಲ್ಲಿ 2023-24 ನೇ ಸಾಲಿನ ಶಾಲಾ ಮಂತ್ರಿಮಂಡಲ ರಚನೆಯಾಯಿತು. ವಿದ್ಯಾರ್ಥಿಗಳಿಗೆ ಮತದಾನದ ಪರಿಕಲ್ಪನೆ ಮಾಡಿಸಲು ನಡೆದ ಶಾಲಾ ಸಂಸತ್ತಿನ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆತ, ಮತಪ್ರಚಾರ,ಮತದಾನ ಇವುಗಳ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.


ಮುಖ್ಯಶಿಕ್ಷಕ ರಾದ ಕಮಲ. ಎ ಮಾರ್ಗದರ್ಶಿ ಶಿಕ್ಷಕರಾದ ಸುಭಾಷ್ ಎನ್ ಹಾಗೂ ಎಲ್ಲಾ ಸಹಶಿಕ್ಷಕರು ಪೋಲಿಂಗ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.

ನಡೆದ ಮತದಾನದಲ್ಲಿ ಶಾಲಾ ಮುಖ್ಯ ಮಂತ್ರಿಯಾಗಿ 7ನೇ ತರಗತಿಯ ಆದಿತ್ಯ ಡಿ.ಜೆ ಉಪ ಮುಖ್ಯಮಂತ್ರಿಯಾಗಿ 6ನೇ ತರಗತಿಯ ಹರ್ಷಿತ್ ಎಂ.ಎಸ್. ಮತ್ತು ವಿರೋಧ ಪಕ್ಷದ ನಾಯಕಿಯಾಗಿ ಪಂಚಮಿ ಎನ್. ಬಿ ಅಯ್ಕೆಯಾದರು.