ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ಲೇಸ್ಮೆಂಟ್ ತರಬೇತಿ

0

ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಒಂದು ವಾರದ ಪ್ಲೇಸ್ಮೆಂಟ್ ತರಬೇತಿಯನ್ನು ಆಯೋಜಿಸಲಾಯಿತು. ಆ ಪ್ರಯುಕ್ತ ತರಬೇತಿಯ ಕೊನೆಯ ದಿನ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್.ಯು.ಜೆ, ವಿದ್ಯಾರ್ಥಿಗಳು ಶ್ರೇಷ್ಠ ಮಟ್ಟದ ತರಬೇತಿ ಹೊಂದಿ ಕಾರ್ಯ ಕ್ಷೇತ್ರಕ್ಕೆ ಅಣಿಯಿಡುವಂತಾಗಬೇಕೆಂದು ನುಡಿದು, 100 ಪ್ರತಿಶತ ಪ್ಲೇಸ್ಮೆಂಟ್ ನಮ್ಮ ಆದ್ಯ ಕರ್ತವ್ಯ ಎಂದು ತಿಳಿಸಿದರು.

ಪ್ರಾಂಶುಪಾಲ ಡಾ. ಸುರೇಶ ವಿ, ಮಾತನಾಡಿ, ವಿದ್ಯಾರ್ಥಿಗಳು ತರಬೇತಿಯಲ್ಲಿ ಮೈಗೂಡಿಸಿಕೊಂಡ ಕೌಶಲ್ಯವನ್ನು ನಿರಂತರವಾಗಿ ಬಳಸಿ ಉತ್ತಮ ಕಂಪೆನಿಗಳಲ್ಲಿ ಉದ್ಯೋಗ ಪಡೆಯಬೇಕೆಂದು ನುಡಿದರು.

ತರಬೇತಿ ಹೊಂದಿದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಿಸಲಾಯಿತು. ವಿದ್ಯಾರ್ಥಿಗಳು ತರಬೇತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ 7th sense solutionನ ತರಬೇತುದಾರರಾದ ಪ್ರದೀಪ್, ವಿದ್ಯಾ, ಶ್ವೇತ ಹಾಗೂ ಕಾಲೇಜಿನ ಟ್ರೈನಿಂಗ್ ಆಂಡ್ ಪ್ಲೇಸ್ಮೆಂಟ್ ಆಫೀಸರ್ ಪ್ರೊಫೆಸರ್ ಅನಿಲ್ ಬಿ. ವಿ, ಪ್ರೊ. ರೇಖಾ ಎ. ಎ, ಪ್ರೊ. ಅಪೂರ್ವ. ಬಿ, ಡಾ. ಭಾಗ್ಯ. ಹೆಚ್. ಕೆ, ಪ್ರೊ. ಸತ್ಯಜಿತ್, ಪ್ರೊ. ಸಿಂಧು ಉಪಸ್ಥಿತರಿದ್ದರು.