ಕೆವಿಜಿ ಐಪಿಎಸ್ ನಲ್ಲಿ ಚುನಾವಣಾ ಪ್ರಣಾಳಿಕೆ

0


ಕೆ ವಿ ಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಚುನಾವಣಾ ಅರಿವು ಮೂಡಿಸುವ ಸಲುವಾಗಿ ಜೂನ್ 12ರಂದು ಚುನಾವಣಾ ಪ್ರಣಾಳಿಕೆಯನ್ನು ನಡೆಸಲಾಯಿತು.


೮ನೇ ತರಗತಿ ವಿದ್ಯಾರ್ಥಿಯರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ತರಬೇತಿದಾರ ಮತ್ತು ಉದ್ಯೋಗ ಅಧಿಕಾರಿಯಾದ ಅನಿಲ್ ಬಿ.ವಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ, ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳ ಜೊತೆ ಸೇರಿ ದೀಪವನ್ನು ಬೆಳಗಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸಲು ಪೂರಕವಾದ ಅಂಶಗಳ ಬಗ್ಗೆ ತಿಳಿಸಿದರು. ಈ ವರ್ಷದ ಶೈಕ್ಷಣಿಕ ಅವಧಿಯಲ್ಲಿ ಆಯ್ಕೆಯಾದ ಎಲ್ಲಾ ನಾಯಕರು ಶ್ರದ್ದೆಯಿಂದ ಇನ್ನೊಬ್ಬರಿಗೆ ತೊಂದರೆಯಾಗದಂತೆ ನಿಮ್ಮ ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸಿ ಎಂದು ಹುರಿದುಂಬಿಸಿದರು.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣವನ್ನು ಬೆಳೆಸುವಲ್ಲಿ ಪ್ರಾಂಶುಪಾಲರ ಮತ್ತು ಶಿಕ್ಷಕ ವೃಂದದವರ ಪ್ರೋತ್ಸಾಹ ಮೆಚ್ಚುವಂತದ್ದು ಎಂಬುದಾಗಿ ತಿಳಿಸಿದರು.


ಬಳಿಕ ಮಾತನಾಡಿದ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಮುಂಬರುವ ಶಾಲಾ ಚುನಾವಣೆಯಲ್ಲಿ ಸೋಲು ಗೆಲುವು ಇದ್ದದ್ದೇ ನಾವು ಅದನ್ನು ಧನಾತ್ಮಕವಾಗಿ ಸ್ವೀಕರಿಸಬೇಕು ಹಾಗೂ ಪ್ರಣಾಳಿಕೆಯಲ್ಲಿ ನುಡಿದಂತೆ ವಿಜಯಿಗಳಾದ ನಂತರ ತಮ್ಮ ಮಾತುಗಳಂತೆ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಶಾಲಾ ಸಂಚಾಲಕರಾದ ಡಾ. ರೇಣುಕಾ ಪ್ರಸಾದ್ ಕೆ.ವಿ, ಮುಖ್ಯ ಕಾರ್ಯನಿರ್ವಣಾಧಿಕಾರಿ ಉಜ್ವಲ್ ಯು.ಜೆ ಶುಭ ಹಾರೈಸಿದರು.
೨೦೨೩-೨೪ ನೇ ಸಾಲಿನ ಚುನಾವಣಾ ಕಣಕ್ಕಿಳಿದ ವಿದ್ಯಾರ್ಥಿಗಳೆಲ್ಲರೂ ಮಾತನಾಡಿ ಪ್ರಣಾಳಿಕೆಯ ಮೂಲಕ ಮತ ಯಾಚಿಸಿದ ರೀತಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗನ್ನು ತಂದುಕೊಟ್ಟಿತು. ಈ ಕಾರ್ಯಕ್ರಮವನ್ನು ೮ನೇ ತರಗತಿ ಮನ್ವಿತಾ ಮತ್ತು ಸೀಮಾ, ಆಯುಷಾ ನಿರೂಪಿಸಿ, ಶಿವಾನಿ ಆರ್ ಸ್ವಾಗತಿಸಿ, ವಿಜ್ಞಾ ವಂದಿಸಿದಳು.
ಕಾರ್ಯಕ್ರಮಕ್ಕೆ ಸಮಾಜ ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ ರೋಹಿಣಿ, ಶೋಭಾ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.