ವಿಶೇಷಚೇತನ ಚಿತ್ರ ಕಲಾವಿದ ಹರೀಶ್ ಕಳಂಜ ಅವರಿಗೆ ಸಹಾಯಧನ ಹಸ್ತಾಂತರ

0

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಹಾಗೂ ಪಂಜ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರಾ ಸಂದರ್ಭದಲ್ಲಿ ಜಲಶ್ರೀ ಪ್ರತಿಷ್ಠಾನ ಟ್ರಸ್ಟ್ (ರಿ)ಕಡ್ಡಾರ್ ,ಸಹಾಯ ಹಸ್ತ ಲೋಕ ಸೇವಾ ಚಾರಿಟೇಬಲ್ ಟ್ರಸ್ಟ್(ರಿ) ಪುತ್ತೂರು,ಶ್ರೀ ಕಾಳಿಕಾಂಬಾ ಗೊಂಬೆಬಳಗ(ತಂಡದವರು ) ಬರಿಮಾರ್ ಪುರುಷಕೋಡಿ ಇದರ ಸಂಯುಕ್ತ ಆಶ್ರಯದಲ್ಲಿ ಅಶಕ್ತ ಕಲಾವಿದರಿಗೆ ನಡೆಸಿದ ನಿಧಿ ಸಂಗ್ರಹ ಅಭಿಯಾನದಲ್ಲಿ ಸಂಗ್ರಹವಾದ ಹಣವನ್ನು ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿದಾನದಲ್ಲಿ ಅಂಗವೈಕಲ್ಯ ದಿಂದ ಬಳಲುತ್ತಿರುವ ಚಿತ್ರಕಲಾವಿದರಾದ ಹರೀಶ್.ಕೆ. ಕಳಂಜ ಅವರಿಗೆ ಸಹಾಯ ಧನವಾಗಿ 10,200ರೂಗಳ ಚೆಕ್ ನ್ನು ದೇವಸ್ಥಾನದ ಅಧ್ಯಕ್ಷ ಯು.ಎಮ್.ಕಿಶೋರ್ ಕುಮಾರ್ ಮೂಲಕ ಜೂ. 12 ರಂದು ಹಸ್ತಾಂತರಿಸಲಾಯಿತು.

ದೇವಸ್ಥಾನದ ಭಜನಾ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಆಚಾರ್ಯ ತೊಡಿಕಾನ,ಪತ್ರಕರ್ತ ತೇಜೇಶ್ವರ್ ಕುಂದಲ್ಪಾಡಿ, ಜಲಶ್ರೀ ಪ್ರತಿಷ್ಠಾನ ಕಡ್ಡಾರ್ ಟ್ರಸ್ಟಿನ ಅಧ್ಯಕ್ಷ ನಿರಂಜನ್ ಆಚಾರ್ಯ ಕಡ್ಲಾರ್, ಯುವ ಗಾಯಕಿ ಅಂಕಿತಾ ಆಚಾರ್ಯ ಕಡ್ಲಾರ್, ಸಹಾಯ ಹಸ್ತ ಲೋಕ ಸೇವಾ(ಪುತ್ತೂರು )ಟ್ರಸ್ಟಿನಅಧ್ಯಕ್ಷ ಡಿ. ಎಸ್. ಒಡ್ಯ,ಕಾರ್ಯದರ್ಶಿ ಮನೋಹರ್ ಪಲಯಮಜಲು, ಶ್ರೀ ಕಾಳಿಕಾಂಬಾ ಗೊಂಬೆ ಬಳಗ ಬರಿಮಾರ್ ಪುರುಷಕೋಡಿ ಇದರ ರಜನೀಶ್ ಆಚಾರ್ಯ ಬರಿಮಾರ್ಉಪಸ್ಥಿತರಿದ್ದರು.