ಅಮರಪಡ್ನೂರು ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ

0

ಯುವ ದಾನಿಗಳ ಬಳಗ ಶಾಲೆಯ ಎಲ್ಲಾ ಮಕ್ಕಳಿಗೆ ಎಲ್ಲಾ ವಿಷಯಗಳಿಗೆ ಬೇಕಾಗುವ ನೋಟ್ ಬುಕ್ ನ್ನು ಜೂ.8 ರಂದು ವಿತರಿಸಿದರು.ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾಗಿದೆ.

ದಾನಿಗಳ ಬಳಗದಲ್ಲಿ ಆರೋಗ್ಯಮಿತ್ರ ಮುರಳಿ ನಳಿಯಾರು, ಶರಣ್ ಕರ್ಮಜೆ, ಅಕ್ಷಯ್ ಮೂಡೈಮಜಲು, ಅಭಿಷೇಕ್ ಪಡ್ಪು, ನವೀನ್ ಪಿಲಿಕಜೆ, ರವಿನಂದನ್ ಹಾಸನ, ಅನುಷಾ ಪಡ್ಪು, ಸ್ವಪ್ನಿತಾ ಬೆಳ್ಳಿಪ್ಪಾಡಿ, ಸುಷ್ಮಾ ಮಾಡಬಾಕಿಲು, ರೇಷ್ಮಾ ಮಾಡಬಾಕಿಲು ಮೊದಲಾದವರಿದ್ದರು. ತಾವು ಕಲಿತ ಸರಕಾರಿ ಕನ್ನಡ ಶಾಲೆಯನ್ನು ಉಳಿಸಿ ಬೆಳೆಸುವುದು ಇವರ ಧ್ಯೇಯವಾಗಿದ್ದು, ಈ ಸಂದರ್ಭದಲ್ಲಿ ಶಾಲಾಭಿವೃದ್ಢಿ ಸಮಿತಿಯ ಉಪಾಧ್ಯಕ್ಷೆ ಗೀತಾ ಕೊರತ್ಯಡ್ಕ, ಮುಖ್ಯ ಗುರುಗಳು, ಸಹಶಿಕ್ಷಕರು ಉಪಸ್ಥಿತರಿದ್ದರು.