ಕಲ್ಮಡ್ಕ ಶಾಲೆಯಲ್ಲಿ ಕಂಪ್ಯೂಟರ್ ಹಸ್ತಾಂತರ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ

0


ಕಲ್ಮಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಹಸ್ತಾಂತರ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಜೂ. ೧೦ರಂದು ಶಾಲಾ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಶಾಲಾ ಮೇಲುಸ್ತುವಾರಿ ಸಮಿತಿಯವರು ಜಂಟಿಯಾಗಿ ನೆರವೇರಿಸಿದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುಬ್ರಾಯ ಓಣ್ಯಡ್ಕ ಇವರು ಪ್ರಸಿದ್ಧ ” ಇನ್ಪೊಸಿಸ್ ಪೌಂಡೇಷನ್” ನವರು ಶಾಲೆಗೆ ಉಚಿತವಾಗಿ ನೀಡಿದ ೫ ಕಂಪ್ಯೂಟರ್ ಗಳನ್ನು ಶಾಲಾ ಮುಖ್ಯ ಶಿಕ್ಷಕಿಯವರಿಗೆ ಹಸ್ತಾಂತರಿಸಿದರು.


ಈ ಸಂರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘಕ್ಕೆ ” ಸದಾಶಿವಯ್ಯ ಗೋಳ್ತಜೆ” ಇವರ ಸ್ಮಾರಕ ಅವರ ಪುತ್ರ ಶ್ಯಾಮ ಗೋಳ್ತಜೆಯವರು ನೀಡಿದ ಶಾಶ್ವತ ನಿಧಿಯಿಂದ ದೊರಕಿದ ವಾರ್ಷಿಕ ಬಡ್ಡಿ ಹಣದಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ಬರೆಯುವ ಪುಸ್ತಕಗಳನ್ನು ಮುಖ್ಯ ಅತಿಥಿಗಳಾದ ಡಾ ಈಶ್ವರಯ್ಯ ಗೋಳ್ತಜೆ ವಿತರಿಸಿ ಶುಭ ಕೋರಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಹರೀಶ್ ಜೋಗಿಬೆಟ್ಟು , ಗ್ರಾಮ ಪಂಚಾಯತು ಸದಸ್ಯರುಗಳಾದ ಹರೀಶ್ ಎಂ ಮತ್ತು ಶ್ರೀಮತಿ ಮೋಹಿನಿ ಎಂ ಇವರು ಅತಿಥಿಗಳಾಗಿ ಉಪಸ್ಥಿತರಿದ್ದರು.


ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಾಯಿನಾರಾಯಣ ಕೆ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಜ್ರಾಕ್ಷಿಯವರು ಸ್ವಾಗತಿಸಿ, ವಂದಿಸಿದರು.