ನಿಂತಿಕಲ್ಲು : ಸಿರಿಸಿದ್ದ ಉಡುಪುಗಳ ಡಿಸ್ಕೌಂಟ್ ಸೇಲ್ ಮಳಿಗೆ ಉದ್ಘಾಟನೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸುಳ್ಯ ಇಲ್ಲಿನ ಸಹಯೋಗದೊಂದಿಗೆ ಸಿರಿಸಿದ್ದ ಉಡುಪುಗಳ ಡಿಸ್ಕೌಂಟ್ ಮಾರಾಟ ಮೇಳ ಜೂನ್ ೧೨ ರಂದು ನಿಂತಿಕಲ್ಲು ವಲಯ ಕಛೇರಿಯಲ್ಲಿ ನಡೆಯಿತು.
ಎಣ್ಮೂರು ಶ್ರೀರಾಮ ಕಾಂಪ್ಲೆಕ್ಸ್ ಮಾಲಕ ಜಯರಾಮ ರೈ ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು.


ಬಟ್ಟೆ ಉತ್ಪನ್ನ, ಆಹಾರ ಉತ್ಪನ್ನ, ಇನ್ನಿತರ ಗೃಹ ಬಳಕೆಯ ವಸ್ತುಗಳನ್ನು ಡಿಸ್ಕೌಂಟ್ ದರದಲ್ಲಿ ಸುಳ್ಯ ಯೋಜನೆಯ ದಿನಕ್ಕೊಂದು ವಲಯದಲ್ಲಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ನಡೆಯಲಿದೆ ಎಂದು ವಲಯ ಮೇಲ್ವಿಚಾರಕರಾದ ಹೇಮಲತಾ ಮಾಹಿತಿ ನೀಡಿದರು.


ನಿಂತಿಕಲ್ಲು ವಲಯ ಅಧ್ಯಕ್ಷ ವಸಂತ ಕುಕ್ಕಾಯಕೋಡಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಯೋಜನೆ ವತಿಯಿಂದ ನಡೆದ ಈ ಸೌಲಭ್ಯವನ್ನು ಸಂಘದ ಸದಸ್ಯರಲ್ಲದೆ ಇತರರು ಖರೀದಿ ಮಾಡಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.


ಮುಖ್ಯ ಅತಿಥಿಗಳಾಗಿ ಎಣ್ಮೂರು ಒಕ್ಕೂಟದ ಅಧ್ಯಕ್ಷ ಪುಟ್ಟಣ್ಣ ಕೊಡ್ಲೆ, ಅಲ್ಲದೇ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಅಧಿಕಾರಿಗಳು, ವಲಯ ಸೇವಾ ಪ್ರತಿನಿಧಿಗಳು, ಕಚೇರಿ ಸಿಬ್ಬಂದಿಗಳು, ಸದಸ್ಯರು ಉಪಸ್ಥಿತರಿದ್ದರು.
ಎಡಮಂಗಲ ಸೇವಾ ಪ್ರತಿನಿಧಿ ರಾಮಣ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವಲಯ ಮೇಲ್ವಿಚಾರಕಿ ಹೇಮಲತಾ ಸ್ವಾಗತಿಸಿದರು.