ಸಮಸ್ಯೆ ಸರಿಪಡಿಸಿದ ಮೆಸ್ಕಾಂ
ಮಂಡೆಕೋಲು ಗ್ರಾಮದ ಮಾರ್ಗ ಶಾಲೆಯ ಮುಂಭಾಗವಾಗಿ ಕೇನಾಜೆಗೆ ಹೋಗುವ ರಸ್ತೆಯ ಮಧ್ಯೆ ಅಕೇಶಿಯ ಮರವೊಂದು ಮುರಿದು ಬಿದ್ದು ವಿದ್ಯುತ್ ತಂತಿಯ ಮೇಲೆ ನೇತಾಡುತ್ತಿದ್ದು ಸಾರ್ವಜನಿಕರ ಮನವಿ ಮೇರೆಗೆ ಜಾಲ್ಸೂರು ಮೆಸ್ಕಾಂ ಶಾಖೆಯ ಇಂಜಿನಿಯರ್ ಮಹೇಶ್ ಕುಳರವರ ನೇತೃತ್ವದಲ್ಲಿ ಸಿಬ್ಬಂದಿಗಳು ತೆರವು ಮಾಡಿದ್ದಾರೆ.
















ವಿದ್ಯುತ್ ತಂತಿಯಲ್ಲಿ ಮರ ನೇತಾಡಿಕೊಂಡಿದ್ದರಿಂದ ಸಾರ್ವಜನಿಕರು, ಶಾಲಾ ಮಕ್ಕಳು ಪ್ರತೀ ನಿತ್ಯ ಸಂಚರಿಸಲು ಭಯ ಪಡುತ್ತಿದ್ದರು. ಈ ಕುರಿತು ಸುದ್ದಿ ವೆಬ್ ಸೈಟ್ ನಲ್ಲಿ ವರದಿ ಪ್ರಸಾರವಾಗಿತ್ತು.
ಈ ಸಮಸ್ಯೆಯನ್ನು ಮನಗಂಡ ಜಾಲ್ಸೂರು ಮೆಸ್ಕಾಂ ಶಾಖೆ ಇಂಜಿನಿಯರ್ ರವರು ವಿದ್ಯುತ್ ತಂತಿಯ ಮೇಲೆ ಇರುವ ಮರವನ್ನು ತೆರವು ಮಾಡಿ ಸಮಸ್ಯೆ ಇತ್ಯರ್ಥಪಡಿಸಿದ್ದಾರೆ.









