ಸಂಪಾಜೆ : ಕೋಟಿ ವೃಕ್ಷ ನೆಡುವ ಕಾರ್ಯಕ್ರಮ

0


ಸಂಪಾಜೆ ಗ್ರಾಮ ಪಂಚಾಯತ್, ಸುಳ್ಯ ವಲಯ ಅರಣ್ಯ ಇಲಾಖೆ ಸಂಜೀವಿನಿ ಒಕ್ಕೂಟದ ನೇತೃತ್ವದಲ್ಲಿ ಕೋಟಿ ವೃಕ್ಷ ನೆಡುವ ಕಾರ್ಯಕ್ರಮ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ಸಂಜೀವಿನಿ ಕಟ್ಟಡದ ಬಳಿ ನಡೆಯಿತು.


ಗ್ರಾಮ ಪಂಚಾಯತ್ ನೇತೃತ್ವದಲ್ಲಿ ೧೦೦೦ ಗಿಡ ನೆಡುವ ಯೋಜನೆ ರೂಪಿಸಲಾಗಿದ್ದು, ಪ್ರಥಮ ಹಂತವಾಗಿ ೫೦೦ ಗಿಡಗಳನ್ನು ಸಂಜೀವಿನಿ ಒಕ್ಕೂಟದ ಮೂಲಕ ನೆಡಲಾಗಿದೆ. ಗಿಡಕ್ಕೆ ನೀರು ಹಾಕುವ ಮೂಲಕ ವಲಯ ಅರಣ್ಯ ಅದಿಕಾರಿ ಮಂಜುನಾಥ್ ಕಾರ್ಯಕ್ರಮದ ಉದ್ಘಾಟನೆ ನೆರವೇರಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪರಿಸರದ ಮಹತ್ವದ ಬಗ್ಗೆ ವಿವರಣೆ ನೀಡಿದರು.


ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ, ತಾಲೂಕು ಐ. ಇ. ಸಿ ಕೋಆರ್ಡಿನೇಟರ್ ನಮಿತಾ,ತಾಂತ್ರಿಕ ಸಲಹೆಗಾರರಾದ ಪ್ರಮೀಳಾ, ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ಸುಮತಿ ಶಕ್ತಿವೇಲು, ಸುಂದರಿ ಮುಂಡಡ್ಕ, ಎಸ್. ಕೆ. ಹನೀಫ್, ಉಪಸ್ಥಿತರಿದ್ದರು ಬ್ಯಾಂಕ್ ಸಖಿ ಭಾರತಿ, ಪಶು ಸಖಿ ಮಾಲತಿ, ಕೃಷಿ ಸಖಿ ಮೋಹಿನಿ ಮಾಹಿತಿ ನೀಡಿದರು.

ಅರಣ್ಯ ಇಲಾಖೆಯ ಚಂದ್ರು, ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ದಮಯಂತಿ, ಕಾರ್ಯದರ್ಶಿ ರತ್ನಾವತಿ, ಗ್ರಾಮ ಕಾಯಕ ಮಿತ್ರ ಸವಿತಾ ಮಾಜಿ ಪಂಚಾಯತ್ ಅಧ್ಯಕ್ಷರಾದ ಯಮುನಾ, ಎನ್. ಆರ್. ಎಲ್. ಎಂ . ತಾಲೂಕು ಸಂಯೋಜಕ ಅವಿನಾಶ್ ಉಮೇಶ್ ಕನಪಿಲ ಹಾಜರಿದ್ದರು ಹೆಚ್ಚಿನ ಸಂಖ್ಯೆಯಲ್ಲಿ ಸಂಜೀವಿನಿ, ಸ್ತ್ರೀ ಶಕ್ತಿ ಸದಸ್ಯರು ಹಾಜರಿದ್ದರು, ಯಶೋಧ ಸ್ವಾಗತಿ

ಸಿ, ಮೋಹಿನಿ ವಂದಿಸಿದರು. ಕಾಂತಿ ಬಿ. ಎಸ್. ಕಾರ್ಯಕ್ರಮ ನಿರೂಪಿಸಿದರು.