ನೀರಬಿದಿರೆ- ಕೊಯಿಕುಳಿ ರಸ್ತೆಯಲ್ಲಿ ಮರಬಿದ್ದು ಸುಗಮ ಸಂಚಾರಕ್ಕೆ ತೊಂದರೆ

0

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ನೀರಬಿದಿರೆ- ಕೊಯಿಕುಳಿ ರಸ್ತೆಯಲ್ಲಿ ಬೃಹತ್ ಗಾತ್ರದ ಮರ ಬಿದ್ದು ದೊಡ್ಡ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ.
ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಬಿದ್ದಿದ್ದು ಸಣ್ಣ ವಾಹನ ಹೋಗುವಂತೆ ಮರವನ್ನು ತುಂಡು ಮಾಡಿ ತೆಗೆಯಲಾಗಿದೆ.

ಇದರಿಂದಾಗಿ ಸ್ಕೂಲ್ ವ್ಯಾನ್ ಸೇರಿದಂತೆ ದೊಡ್ಡ ವಾಹನ ಸಂಚಾರಕ್ಕೆ ಅಸಾಧ್ಯವಾಗಿದೆ. ಅದರ ಬುಡವನ್ನು ಜೆಸಿಬಿ ಮೂಲಕವೇ ತೆಗೆಯಬೇಕಾಗಿರುವುದರಿಂದ ನಗರ ಪಂಚಾಯತ್ ಆಡಳಿತ ಗಮನ ಹರಿಸಿ ಮರವನ್ನು ತೆರವು ಮಾಡಬೇಕಾಗಿದೆ