ಕುಕ್ಕೆ ಸುಬ್ರಹ್ಮಣ್ಯದ ಬಗ್ಗೆ ಅಪ ನಂಬಿಕೆ ತರಿಸುವ ಕೆಲಸ ನಡೆಯುತ್ತಿದೆ

0

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಒಂದೇ ಒಂದು ರೂಪಾಯಿ ಅವ್ಯವಹಾರ ನಡೆದಿಲ್ಲ

ಒಳ ಒಪ್ಪಂದ ಮಾಡಿ ದಂದೆ ಮಾಡಿದವರು ಈಗ ಮಾತನಾಡುತಿದ್ದಾರೆ

ಸುಬ್ರಹ್ಮಣ್ಯದಲ್ಲಿ ಬಿಜೆಪಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ

ನಾವೆಲ್ಲ ಆರಾಧಿಸುವ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿಯ ಮೇಲೆ ಇಲ್ಲದ ಸಲ್ಲದ ಸುಳ್ಳು ಅಪಾದಾನೆ ಮಾಡಿ ಆರೋಪ ಹೊರಿಸಿ ದೇಶ ವಿದೇಶದಿಂದ ಬರವ ಭಕ್ತಾದಿಗಳಲ್ಲಿ ಅಪ ನಂಬಿಕೆ ಬರುವಂತೆ ಮಾಡಿರುವ ಕಾಂಗ್ರೆಸ್ ಸಮಿತಿ ಸುಬ್ರಹ್ಮಣ್ಯ ಇವರ ಹೇಳಿಕೆ ಖಂಡಿಸುತ್ತೇವೆ. ಕುಕ್ಕೆ ಸುಬ್ರಹ್ಮಣ್ಯದ ಬಗ್ಗೆ ಅಪ ನಂಬಿಕೆ ತರಿಸುವ ಕೆಲಸ ನಡೆಯುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಒಂದೇ ಒಂದು ರೂಪಾಯಿ ಅವ್ಯವಹಾರ ನಡೆದಿಲ್ಲ,

ಒಳ ಒಪ್ಪಂದ ಮಾಡಿ ದಂದೆ ಮಾಡಿದವರು ಈಗ ಮಾತನಾಡುತಿದ್ದಾರೆ ಎಂದು ಸುಬ್ರಹ್ಮಣ್ಯದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಜು.30 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ವೆಂಕಟ್ ವಳಲಂಬೆ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿ ನಡೆಸಿರುವವರೆಲ್ಲರಿಗೂ ದೇವಳದ ಆಡಳಿತ ಮಂಡಳಿ ಮತ್ತು ದೇವಾಲಯದಿಂದ ವೈಯಕ್ತಿಕ ಲಾಭ ಪಡೆದುಕೊಂಡಿದ್ದಾರೆ. ಈಗ ಯಾವುದೇ ಮದ್ಯ ವರ್ತಿ ಕೆಲಸಗಳಿಗೆ ಈಗಿನ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಪ್ರಾಮಾಣಿಕ ಕಾರ್ಯಗಳಿಂದ ಕ್ಷೇತ್ರದ ಪಾವಿತ್ರಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತಿದ್ದಾರೆ. ಇದು ಇವರಿಗೆ ನುಂಗಲಾರದ ತುತ್ತಾಗಿದೆ ಎಂದರು.

ಜನತಾ ಬಜಾರ್ ನಿಂದ ದಿನಸಿ ಖರೀದಿ ಸರ್ಕಾರದ ಆದೇಶ. ದಿನಸಿ ಖರೀದಿಯಲ್ಲಿ ವ್ಯತ್ಯಾಸಗಳಿದ್ದಲ್ಲಿ ಕಾರ್ಯ ನಿರ್ವಹಣಾಧಿಕಾರಿ ಪ್ರತಿ ತಿಂಗಳು ಪರಿಶೀಲಿಸಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದರು. ಈ ಹಿಂದಿನ ಕಾಂಗ್ರೆಸ್ ಆಡಳಿತ ಇದ್ದಾಗ ಯಾವ ವ್ಯಕ್ತಿಗಳಿಂದ ದೇವಸ್ಥಾನಕ್ಕೆ ಹಣ ಪಾವತಿ ಬಾಕಿ ಇತ್ತೋ ಅವರಿಗೆ ಮತ್ತೆ ಟೆಂಡರ್ ಅಥವಾ ಏಲಂ ಕೊಟ್ಟ ವ್ಯವಸ್ಥೆ ನಡೆದಿದ್ದು ದಂದೆ ನಡೆಸಿದ್ದಾರೆ ಎಂದರು.

ಕಾಂಗ್ರೆಸ್ 70 ವರ್ಷ ಆಡಳಿತ ಮಾಡಿದಾಗ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ, ನಮ್ಮ ಆಡಳಿತ ವಿದ್ದಾಗ ಮತ್ತು ಕ್ಷೇತ್ರದ ಶಾಸಕರಾದ ಎಸ್ ಅಂಗಾರ ರವರ ವಿಶೇಷ ಕಾಳಜಿಯಿಂದ ಕ್ಷೇತ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಹೆಸರು ನೀಡಿ 180 ಕೋಟಿ ಮತ್ತು ಮುಂದುವರೆದ ಕಾಮಗಾರಿಯಿಂದ ಕ್ಷೇತ್ರ ಉತ್ತಮ ಪ್ರಗತಿ ಹೊಂದಿದ್ದು. ಮುಂದೆ ಇನ್ನಷ್ಟು ಪ್ರಗತಿ ಯಾಗಲಿದೆ. ಮಾತ್ರವಲ್ಲದೆ ಮುಂದಾಲೋಚನೆಯಿಂದ ಸಾವಿರಾರು ಗಿಡಗಳನ್ನು ನೆಡಿಸುವ ಮೂಲಕ ಮುಂದಿನ ನಾಲ್ಕೈದು ವರ್ಷದಲ್ಲಿ ಪರಿಸರ ಚೆನ್ನಾಗಿ ಮೂಡಿಬರಲಿದೆ.

ಇದನ್ನು ಸಹಿಸದ ಕೆಲವರು ಈ ರೀತಿಯ ಹೇಳಿಕೆಗಳು ಸತ್ಯಕ್ಕೆ ದೂರವಾಗಿದೆ, ಈಗಿನ ಆಡಳಿತ ಮಂಡಳಿಗೆ ನಮ್ಮ ಬೆಂಬಲವಿದೆ ಎಂದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಸುಬ್ರಹ್ಮಣ್ಯ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ನಡುತೋಟ, ದಿನೇಶ್ ಸಂಪ್ಯಾಡಿ, ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯರಾದ ಶಿವರಾಮ ನೆಕ್ರಾಜೆ, ಚಿದಾನಂದ ಕಂದಡ್ಕ ಉಪಸ್ಥಿತರಿದ್ದರು.