ಅಮರಮುಡ್ನೂರು ಗ್ರಾಮದ ಆರ್ನೋಜಿ ಮನೆತನದ ಹರೀಶ್ ರವರು ಆ.3 ರಂದು ನಿಧನರಾಗಿದ್ದು ಮೃತರ ಉತ್ತರ ಕ್ರಿಯಾಧಿ ಸದ್ಗತಿ ಹಾಗೂ ಶ್ರದ್ಧಾಂಜಲಿ ನುಡಿನಮನ ಕಾರ್ಯಕ್ರಮ ಆ.13 ರಂದು ಆರ್ನೋಜಿ ಮನೆಯಲ್ಲಿ ನಡೆಯಿತು.















ಮೃತರ ಜೀವನಗಾಥೆಯ ಕುರಿತು ಸಾಮಾಜಿಕ ಧುರೀಣ ಅಶೋಕ ಎಡಮಲೆ ಯವರು ಮಾತನಾಡಿದರು.
ಮೃತರ ಸಹೋದರ ಅಮರಮುಡ್ನೂರು ಪಂಚಾಯತ್ ಸದಸ್ಯ ಹೂವಪ್ಪ ಗೌಡ ಆರ್ನೋಜಿ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ವಿಮಲಾ, ಪುತ್ರ ಪೋಲಿಸ್ ಕಾನ್ಟ್ ಟೇಬಲ್ ಅಶೋಕ್ ಆರ್ನೋಜಿ, ಸಹೋದರ ಡೀಯಪ್ಪ ಗೌಡ ಆರ್ನೋಜಿ, ಸಹೋದರಿ
ಶ್ರೀಮತಿ ನಳಿನಿ ಪದ್ಮನಾಭ ಕೆದಿಕಾನ, ಸೊಸೆ ಶ್ರೀಮತಿ ಸಂಧ್ಯಾ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಕೋರಿದರು.









