ಭಾರತ್ ಸ್ಕೌಟ್ಸ್ – ಗೈಡ್ಸ್ ಸ್ಥಳೀಯ ಸಂಸ್ಥೆಯ ವತಿಯಿಂದ ದೇಶ ಭಕ್ತಿ ಗೀತೆ ಗಾಯನ

0

ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆಯಸ್ಥಳೀಯ ಸಂಸ್ಥೆ ಸುಳ್ಯದ ವತಿಯಿಂದ ನಾಡೋಜ ಡಾ. ಗೊ.ರು.ಚನ್ನಬಸಪ್ಪನವರ ಹೆಸರಲ್ಲಿ,ದೇಶ ಭಕ್ತಿ ಗೀತಾಗಾಯನ ಸ್ಪರ್ಧೆಯು ವಿವೇಕಾನಂದ ವಿದ್ಯಾಸಂಸ್ಥೆ ವಿನೋಬನಗರ ಸುಳ್ಯದಲ್ಲಿ ಜರಗಿತು. ವಿವೇಕಾನಂದ ವಿದ್ಯಾಸಂಸ್ಥೆಯ ಸಂಚಾಲಕರು ಸುಧಾಕರ ಕಾಮತ್ ದೀಪ ಬೆಳಗಿಸಿ , ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ, ಸಭಾ ಅಧ್ಯಕ್ಷತೆ ವಹಿಸಿ ಹಿತನುಡಿಗಳನ್ನಾಡಿದರು.

ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಶಶಶಿಧರ್ ಎಂ.ಜೆ. ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀಮತಿ ಲೀಲಾವತಿ ಸ್ವಾಗತಿಸಿ ,ಶ್ರೀಮತಿ ಪ್ರೇಮಲತಾ ಎ ಹೆಚ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ವಂದಿಸಿದರು. ವೇದಿಕೆಯಲ್ಲಿ ಎ.ಡಿ.ಸಿ. ರಾಮಕೃಷ್ಣ, ಶ್ರೀಮತಿ ಸಂಧ್ಯಾ ಕುಮಾರಿ ಇ.ಸಿ.ಒ. ಬಿ.ಇ.ಒ.ಕಛೇರಿ. ಹಾಗೂ ವಿವೇಕಾನಂದ ವಿದ್ಯಾಸಂಸ್ಥೆಗಳ ಮುಖ್ಯೋಪಾಧ್ಯಾಯರಾದ ಗಿರೀಶ್ ಕುಮಾರ್, ಮತ್ತು ಶಿವಪ್ರಸಾದ್ ಕಾರಿಂಜ ಉಪಸ್ಥಿತರಿದ್ದರು.

ಕಾರ್ಯಕ್ರಮದ ಲ್ಲಿ ಸುಳ್ಯ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಮಾಧವ ಗೌಡ,ರಾಜುಪಂಡಿತ್, ಸಂಯೋಜಕರಾದ ಶ್ರೀಹರಿ ಪೈಂದೋಡಿ, ಖಜಾಂಜಿ ಶ್ರೀಮತಿ ರೇವತಿ ಕೆ ಹಾಗೂ ನಿರ್ಣಾಯಕರುಗಳು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ದೇಶಭಕ್ತಿ ಗೀತಾ ಗಾಯನ ಸ್ಪರ್ಧೆ ನಡೆಸಲಾಯಿತು. ಒಟ್ಟು 10 ಸಂಸ್ಥೆಗಳ ಮಕ್ಕಳು ಭಾಗವಹಿಸಿದ್ದರು.ಕಬ್ಸ್ 3 ತಂಡ, ಬುಲ್ ಬುಲ್ಸ್ 3 ತಂಡ, ಸ್ಕೌಟ್ಸ್ 7ತಂಡ, ಗೈಡ್ಸ್ 9 ತಂಡಗಳು ಭಾಗವಹಿಸಿದ್ದವು.

ತದ ನಂತರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಸುಳ್ಯ ರೋಟರಿ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷರಾದ ಪ್ರಭಾಕರ್ ನಾಯರ್,ರೊ. ಮಧುಸೂದನ್, ಅತಿಥಿಗಳಾಗಿ ಹಾಗೂ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ರೊ.ಶ್ರೀಮತಿ ಲತಾಮಧುಸೂದನ್ ಮತ್ತು ವಿವೇಕಾನಂದ ವಿದ್ಯಾಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದು ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಿ ಪ್ರೋತ್ಸಾಹಕ ಮಾತುಗಳನ್ನಾಡಿದರು. ಸ್ಥಳೀಯ ಸಂಸ್ಥೆಯ ಅಧ್ಯಕ್ಷರು ಸ್ವಾಗತಿಸಿ, ಸ್ಕೌಟರ್ ಜೀವನ್ ವಂದಿಸಿದರು. ಶ್ರೀ ಹರಿ ಪೈಂದೋಡಿ ಕಾರ್ಯಕ್ರಮ ನಿರ್ವಹಿಸಿದರು.
ವಿಜೇತರು:-
ಕಬ್ ವಿಭಾಗ:
ಪ್ರಥಮ :– ಆರ್ಯ ಸಿ. ಕೆ.ಮತ್ತು ತಂಡ. ರೋಟರಿ ಹಿ.ಪ್ರಾ.ಶಾ.ಸುಳ್ಯ.
ದ್ವಿತೀಯ :–ಹವೀಶ್ ಕುಮಾರ್ ಮತ್ತು ತಂಡ,ಸಂತ ಬ್ರಿಜಿಡ್ಸ್ ಸಿ. ಪ್ರಾ. ಶಾಲೆ.ಸುಳ್ಯ
ತೃತೀಯ :–ಚಿನ್ಮಯ್ ಮತ್ತು ತಂಡ ಸಂತ ಜೋಸೆಫ್ ಶಾಲೆ ಸುಳ್ಯ

ಸ್ಕೌಟ್ ವಿಭಾಗ:-
ಪ್ರಥಮ– ಅಶ್ವಿಜ್ ಅತ್ರೇಯ ಮತ್ತು ತಂಡ . ಸಂತ ಜೋಸೆಫ್ ಆಂ. ಮಾ. ಶಾಲೆ . ಸುಳ್ಯ
ದ್ವಿತೀಯ –ಪ್ರಜ್ವಲ್ ಕೆ. ವಿ.ಮತ್ತು ತಂಡ , ರೋಟರಿ ಪ್ರೌಢ ಶಾಲೆ ಸುಳ್ಯ
ತೃತೀಯ –ಪ್ರಜ್ವಲ್ ಕೆ ಎ. ಮತ್ತು ತಂಡ. ಜಿ.ಪಿ.ಯು.ಸಿ. ಸುಳ್ಯ

ಬುಲ್ ಬುಲ್ ವಿಭಾಗ:
ಪ್ರಥಮ–ಅದ್ವಿತ ಬಿ ಆರ್ ಮತ್ತು ತಂಡ -ಸಂತ ಜೋಸೆಫ್ ಆಂ. ಮಾ. ಶಾಲೆ ಸುಳ್ಯ
ದ್ವಿತೀಯ –ಸ್ವಸ್ತಿ ಪಿ . ಮತ್ತು ತಂಡ., ರೋಟರಿ ಸಿ. ಪ್ರಾ. ಶಾಲೆ ಸುಳ್ಯ
ತೃತೀಯ — ಫಾತಿಮತ್ ಶಝಾ ಮತ್ತು ತಂಡ. ಸಂತ ಬ್ರಿಜಿಡ್ಸ್ ಹಿ.ಪ್ರಾ.ಶಾಲೆ ಸುಳ್ಯ

ಗೈಡ್ ವಿಭಾಗ:—
ಪ್ರಥಮ –ಪೂರ್ವಿಕಾ ಆರ್ ಕೆ. ಮತ್ತು ತಂಡ, -ರೋಟರಿ ಪ್ರೌಢ ಶಾಲೆ ಸುಳ್ಯ
ದ್ವಿತೀಯ –ಅವನಿ ಎಮ್.ಎಸ್.ಮತ್ತು ತಂಡ . ಸಂತ ಜೋಸೆಫ್ ಆಂ.ಮಾ.ಶಾಲೆ ಸುಳ್ಯ
ತ್ರತೀಯ –ಶರಣ್ಯ ಪಿ. ಜಿ. ಮತ್ತು ತಂಡ – ಜಿ. ಪಿ. ಯು. ಸಿ. ಸುಳ್ಯ