ರಾಷ್ಟ್ರಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿನಿಶ್ಚಲ್ ಕೆ.ಜಿ. ಪ್ರಥಮ

0

ಬಿ.ಕೆ.ಎಸ್ ಐಯ್ಯಂಗಾರ್ ಸ್ಮರಣಾರ್ಥ 7ನೇ ವರ್ಷದ ರಾಷ್ಟ್ರಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ – 2023 ಸ್ಪರ್ಧೆಯಲ್ಲಿ 15-20ರ ವಯೋಮಾನದ ಬಾಲಕರ ವಿಭಾಗದಲ್ಲಿ ನಿಶ್ಚಲ್ ಕೆ.ಜಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಆದಿತ್ಯ ಸಾಯಿ ಯೋಗ ಕೇಂದ್ರ ಮತ್ತು ಶಿವ ಜ್ಯೋತಿ ಯೋಗ ಕೇಂದ್ರ ಬೆಂಗಳೂರು ಸಹಯೋಗದೊಂದಿಗೆ ಆಗಸ್ಟ್ 4,5, 6 ರಂದು ಆನ್ಲೈನ್ ಮುಖಾಂತರ ಸ್ಪರ್ಧೆ ನಡೆಯಿತು.

ಇವರು ಪೆರಾಜೆ ಗ್ರಾಮದ ಕೆರಂಬಿ ಮನೆಯ ಇಂಜಿನಿಯರ್ ಜನಾರ್ಧನ ಗೌಡ ಹಾಗೂ ಜ್ಯೋತಿ ದಂಪತಿಗಳ ಪುತ್ರ. ಪ್ರಸ್ತುತ ಪುತ್ತೂರಿನಲ್ಲಿ ನೆಲೆಸಿರುತ್ತಾರೆ.