ಸೆ.19- 23: ಸುಳ್ಯದಲ್ಲಿ 55 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ -108 ತೆಂಗಿ ಕಾಯಿ ಗಣಪತಿ ಹವನ

0

ಸುಳ್ಯ ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ, ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಇದರ ಆಶ್ರಯದಲ್ಲಿ
55ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸುಳ್ಳ ಚೆನ್ನಕೇಶವ ದೇವಸ್ಥಾನದಲ್ಲಿ ಸೆ. 19 ರಿಂದ ಮೊದಲ್ಗೊಂಡು ಸೆ. 23 ರ ತನಕ “ಸಮಾಜ ಸಂಘಟನೆ ಮತ್ತು ಧರ್ಮ ಜಾಗೃತಿಗಾಗಿ” ಎಂಬ ಆಶಯದೊಂದಿಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.

ಸೆ .19 ರಂದು ಬೆಳಗ್ಗೆ ಗಣಪತಿಹೋಮ, ಶ್ರೀ ಗಣೇಶನ ಮೂರ್ತಿ ಪ್ರತಿಷ್ಠೆಯಾಗಿ ಉತ್ಸವದ ಉದ್ಘಾಟನೆಯು ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಉಮೇಶ್ ಪಿ.ಕೆ ಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವುದು. ಮಾಜಿ ಸಚಿವ ಎಸ್. ಅಂಗಾರ ಉತ್ಸವದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ ಚಿದಾನಂದ, ಕಸ್ತೂರಿ ನರ್ಸರಿ ಮಾಲಕ ಮಧುಸೂದನ್ ಉಪಸ್ಥಿತರಿರುವರು.

ಅಪರಾಹ್ನ ಗಂಟೆ 3.00 ರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 6.00 ಕ್ಕೆ ಸಭಾ ಕಾರ್ಯಕ್ರಮ ಮತ್ತು ವಿಜೇತರಿಗೆ ಬಹುಮಾನ ವಿತರಣೆಯು ನಡೆಯಲಿರುವುದು. ಸಮಾರಂಭದ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿಯ ಅಧ್ಯಕ್ಷ ಸೋಮನಾಥ್ ಕೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ | ಹರಪ್ರಸಾದ್ ತುದಿಯಡ್ಕ, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ, ಉಪನ್ಯಾಸಕ ರಾಮಕೃಷ್ಣ ಭಟ್ ಉಪಸ್ಥಿತರಿರುವರು.
ರಾತ್ರಿ ಗಂಟೆ 7.00 ರಿಂದ ವಿವೇಕಾನಂದ ವಿದ್ಯಾಸಂಸ್ಥೆ ವಿನೋಬನಗರ ಜಾಲ್ಸೂರು ಇದರ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ ನಡೆಯಲಿರುವುದು.

ಸೆ. 20 ರಂದು ಅಪರಾಹ್ನ ಗಂಟೆ 3.00 ರಿಂದ ಭಜನಾ ಕಾರ್ಯಕ್ರಮ, ಸಂಜೆ ಗಂಟೆ 6.00 ಕ್ಕೆ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಮತ್ತು ಬಳಗ ನಾಟ್ಯರಂಗ ಪುತ್ತೂರು ಇವರಿಂದ ನಾಟ್ಯಾರ್ಪಣಂ ಭರತನಾಟ್ಯ ಕಾರ್ಯಕ್ರಮ,
ಸೆ .21 ರಂದು ಅಪರಾಹ್ನ ಗಂಟೆ 4.00 ರಿಂದ ಭಜನಾ ಕಾರ್ಯಕ್ರಮ,ಸಂಜೆ ಗಂಟೆ 6.00 ರಿಂದ ವಿದುಷಿ ಸುಜಾತ ಮುಳ್ಳೇರಿಯ ಮತ್ತು ಬಳಗ ಇವರಿಂದ ನೃತ್ಯ ವೈಭವ,
ಸೆ. 22 ಅಪರಾಹ್ನ ಗಂಟೆ 3 ರಿಂದ ಭಜನಾ ಕಾರ್ಯಕ್ರಮ, ಸಂಜೆ ಗಂಟೆ 6.00ರಿಂದ ದಕ್ಷ ಯಜ್ಞ ಎಂಬ ಯಕ್ಷಗಾನ ಕಥಾ ಪ್ರಸಂಗ ಪ್ರದರ್ಶನವಾಗಲಿರುವುದು. ಸೆ. 23 ರಂದು ಬೆಳಗ್ಗೆ ಗಂಟೆ 7.00 ರಿಂದ ಶ್ರೀ
ವಿಘ್ನೇಶ್ವರನ ಸನ್ನಿಧಿಯಲ್ಲಿ 108 ತೆಂಗಿನಕಾಯಿ ಗಣಪತಿ ಹವನ, ಮಧ್ಯಾಹ್ನ ಪೂರ್ಣಾಹುತಿಯಾಗಿ ಪ್ರಸಾದ ವಿತರಣೆ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಲಿರುವುದು. ಅಪರಾಹ್ನ ಗಂಟೆ 3.00 ರಿಂದ ಶ್ರೀ ಗಣೇಶನ ವಿಸರ್ಜನಾ ಶೋಭಾ ಯಾತ್ರೆಯು ಸುಳ್ಯದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಕುಣಿತ ಭಜನೆಯೊಂದಿಗೆ, ವಾದ್ಯ ಘೋಷ, ಚೆಂಡೆ ವಾದನದೊಂದಿಗೆ ವಿಶೇಷವಾದ ಅಲಂಕೃತ ಮಂಟಪದಲ್ಲಿ ಪಯಸ್ವಿನಿ ನದಿಯ ತನಕ ಸಾಗಿ ಬಂದು ಜಲಸ್ತಂಭನಗೊಳಿಸಲಾಗುವುದು ಎಂದು ಸಮಿತಿ ಅಧ್ಯಕ್ಷರು ತಿಳಿಸಿದರು