ಕೆಸಿಎಫ್ ಒಮಾನ್ ಸಲಾಲ ಝೋನ್ ವತಿಯಿಂದ ರಬೀಅ್ 23 ಬೃಹತ್ ಮೀಲಾದ್ ಸಮಾವೇಶ

0

ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಒಮಾನ್ ಸಲಾಲ ಝೋನ್ ನ ವತಿಯಿಂದ ಜಗತ್ತಿಗೆ ಕರುಣೆಯ ಪ್ರವಾದಿ ಎಂಬ ಶೀರ್ಷಿಕೆಯೊಂದಿಗೆ ಬೃಹತ್ ಮೀಲಾದ್ ಸಮಾವೇಶವು ನೈರೋಝ್ ರೆಸ್ಟ್.ಹೌಸ್ ದಾರೀಝ್ ನಲ್ಲಿ ನಡೆಯಿತು.

ಮಕ್ಕಳ ಮೀಲಾದ್ ಸಾಂಸೃತಿಕ ಕಲರವದೊಂದಿಗೆ ಸಂಜೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ದಫ್ ಪ್ರದರ್ಶನ.ಹಾಗೂ ಉಸ್ತಾದರುಗಳ ನೇತೃತ್ವದಲ್ಲಿ ಬುರ್ದಾ ಹಾಗೂ ಮೌಲೂದ್ ನಡೆಯಿತು.

KCF ಒಮಾನ್ ಸಲಾಲ ಝೋನ್ ಅಧ್ಯಕ್ಷರಾದ ಜನಾಬ್ ಅಬ್ದುಲ್ ಲತೀಫ್ ಸುಳ್ಯ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಮಜೀದ್ ಅಮಾನಿ ಕೊಡಗು ರವರು ದುಆ ನೆರವೇರಿಸಿದ ಕಾರ್ಯಕ್ರಮದಲ್ಲಿ KCF ಸಲಾಲ ಝೋನ್ ಸಂಘಟನಾ ಅಧ್ಯಕ್ಷ ಶರೀಫ್ ಮಿಸ್ಬಾಯಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿದ್ದ ಜುನೈದ್ ಹಿಮಮಿ ಸಖಾಫಿ ಇಹ್ಸಾನ್ ದಾಈ ಚಿತ್ರದುರ್ಗ ಇವರು ‘ಜಗತ್ತಿಗೆ ಕರುಣೆಯ ಪ್ರವಾದಿ’ ವಿಷಯದ ಕುರಿತು ಹಾಗೂ ಇಹ್ಸಾನ್ ಕರ್ನಾಟಕದ ಕಾರ್ಯಚರಣೆ ಬಗ್ಗೆ ವಿವರಿಸಿದರು.

ಹಾಗೂ ನಅ್’ತೇ ಶರೀಫ್ ಮೂಲಕ ಪ್ರಖ್ಯಾತಿ ಪಡೆದ ಮುಈನ್ ಖಾದ್ರಿ ಬೆಂಗಳೂರು ಇವರ ಪ್ರವಾದಿ ಕೀರ್ತನೆಗಳು ಜನರ ಮೆಚ್ಚುಗೆಗೆ ಪಾತ್ರಾರರಾದರು.

ವೇದಿಕೆಯಲ್ಲಿ ಇತರ ಅತಿಥಿಗಳಾಗಿ ಸಯ್ಯದ್ ಥಾಬಿರ್ ತಾಲಿಬ್ ಅಲ್ ಬೌಮರ್ ಹಾಗೂ KCF IC ಇಹ್ಸಾನ್ ಕರ್ನಾಟಕ ವಿಭಾಗದ ಕಾರ್ಯದರ್ಶಿ ಹಂಝ ಹಾಜಿ ಕನ್ನಂಗಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಷೀರ್ ಅಡ್ಕಾರ್, ಕಮಾಲ್ ಸುಳ್ಯ , ಕಾದರ್ ಸುಳ್ಯ , ರಫೀಕ್ ಇನ್ನ, ಅಶ್ರಫ್ ಪಡುಬಿದ್ರೆ , ಅದಿಲ್ ಮಾಚಾರ್ , ಹಮೀದ್ ಪೈಚಾರ್ , ಶರೀಫ್ ಕುಜತಬೈಲ್ , ಮಾಇಝ್ ಸೂರಿಬೈಲು, ಶಫೀಕ್ ಮಂಜೇಶ್ವರ , ನಾಸರ್ ಪಡುಬಿದ್ರೆ , ಅಬ್ದುಲ್ ಕಾದರ್ ಮನ್ನಾಪು , ರಝಾಕ್ ಪಾಳೇರಿ,ಫಾರೂಕ್ ಕೃಷ್ಣಾಪುರ ಹಾಗೂ KCF ಸಲಾಲ ಝೋನ್ ನಾಯಕರು , ಸದಸ್ಯರು, ಹಿತೈಷಿಗಳು, ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

ಕೆಸಿಎಫ್ ಸಲಾಲ ಝೋನ್ ಪ್ರಧಾನ ಕಾರ್ಯದರ್ಶಿ ಉಮರ್ ಫಾರೂಕ್ ಸೂರಿಬೈಲು ಸ್ವಾಗತಿಸಿ, ನಾಸಿರ್ ನಂದಾವರ ಧನ್ಯವಾದಗೈದರು. ಕಲಂದರ್ ಬಾವ ಪರಪ್ಪು ಕಾರ್ಯಕ್ರಮ ನಿರೂಪಿಸಿದರು.