ಕೆ.ವಿ.ಜಿ. ಮೆಡಿಕಲ್ ಕಾಲೇಜ್ ವಾರ್ಷಿಕ ದಿನಾಚರಣೆ

0

ಜನಸೇವೆಯೇ ವೈದ್ಯಕೀಯ ವೃತ್ತಿಯ ಉದ್ದೇಶ : ಡಾ.ಶಿವಶರಣ್ ಶೆಟ್ಟಿ

*ಜನರ ಆರೋಗ್ಯ ಸೇವೆ ನೀಡಿ ಅವರ ನೋವನ್ನು ನಿವಾರಿಸುವುದೇ ವೈದ್ಯಕೀಯ ವೃತ್ತಿಯ ಗುರಿ. ಪವಿತ್ರವಾದ ಈ ವೃತ್ತಿಯ ಉದ್ದೇಶ ಸಾಧಿಸುವಲ್ಲಿ ನೀವೆಲ್ಲ ಯಶಸ್ವಿಯಾಗಿರಿ. ಔಷಧಿ ವಿಜ್ಞಾನ. ಆದರೆ ನೀವು ನೀಡುವ ಆರೋಗ್ಯ ಸೇವೆ ಒಂದು ಕಲೆ” ಎಂದು ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ಸೆನೆಟ್ ಸದಸ್ಯ ಡಾ.ಶಿವಶರಣ್ ಶೆಟ್ಟಿ ನುಡಿದರು.

ಅವರು ಅ.12 ರಂದು ನಡೆದ ಕೆ.ವಿ.ಜಿ. ಮೆಡಿಕಲ್ ಕಾಲೇಜ್ ವಾರ್ಷಿಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾಲೇಜ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ವಹಿಸಿದ್ದರು.


ಅಕಾಡೆಮಿ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ, ಕಾರ್ಯದರ್ಶಿ ಕೆ.ವಿ.ಹೇಮನಾಥ್, ಮೆಡಿಕಲ್ ಕಾಲೇಜ್ ಡೀನ್ ಡಾ.ನೀಲಾಂಬಿಕೆ ನಟರಾಜನ್, ಮೆಡಿಕಲ್ ಸುಪರಿಂಟೆಂಡೆಂಟ್ ಡಾ.ಗೋಪಿನಾಥ್ ಶೆಣೈ, ಸೈಕ್ರಿಯಾಟ್ರಿಕ್ ವಿಭಾಗದ ಎಚ್.ಒ.ಡಿ. ಡಾ.ಪೂನಂ, ಸ್ಟೂಡೆಂಟ್ ಕೌನ್ಸಿಲ್ ಅಧ್ಯಕ್ಷೆ ಡಾ.ಗ್ರೀಷ್ಮ ಉನ್ನಿಕೃಷ್ಣನ್, ಉಪಾಧ್ಯಕ್ಷ ಡಾ.ಮನೋಜ್ ಗೌಡ, ಪ್ರಧಾನ ಕಾರ್ಯದರ್ಶಿ ಶ್ರೀವತ್ಸ ಕೆ., ಜತೆ ಕಾರ್ಯದರ್ಶಿ ಜಾಸ್ಮಿನ್ ಧಾಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಇ-ಮ್ಯಾಗಝಿನ್ ಸ್ವಾಸ್ಥ್ಯವನ್ನು ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ಬಿಡುಗಡೆಗೊಳಿಸಿದರು. ಮ್ಯಾಗಝಿನ್ ಸಂಪಾದಕರಾದ ಬಯೋ ಕೆಮಿಸ್ಟ್ರಿ ವಿಭಾಗ ಮುಖ್ಯಸ್ಥ ಡಾ.ಶಿವರಾಜ್ ಶಂಕರ್ ಮ್ಯಾಗಝಿನ್ ಪರಿಚಯಗೈದರು. ಡಾ.ಶ್ರುತಿ ರೈಯವರು ಮುಖ್ಯ ಅತಿಥಿ ಡಾ.ಶಿವಶರಣ್ ಶೆಟ್ಟಿಯವರನ್ನು ಪರಿಚಯಿಸಿದರು.

ಎಲ್ಲ ವಿಭಾಗಗಳು ಮತ್ತು ಸಬ್ಜೆಕ್ಟ್ ಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸ್ಟೂಡೆಂಟ್ ಕೌನ್ಸಿಲ್ ಚೀಫ್ ಅಡ್ವೈಸರ್ ಡಾ.ಗೀತಾ ದೊಪ್ಪ ಸ್ವಾಗತಿಸಿದರು. ಡೀನ್ ಡಾ.ನೀಲಾಂಬಿಕೆ ನಟರಾಜನ್ ಕಾಲೇಜಿನ ಕಾರ್ಯಚಟುವಟಿಕಗಳ ವಿವರವಾದ ವರದಿ ವಾಚಿಸಿದರು.


ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷೆ ಡಾ.ಗ್ರೀಷ್ಮ ಉನ್ನಿಕೃಷ್ಣನ್, ಉಪಾಧ್ಯಕ್ಷ ಡಾ.ಮನೋಜ್ ಗೌಡ, ಪ್ರಧಾನ ಕಾರ್ಯದರ್ಶಿ ಶ್ರೀವತ್ಸ ಕೆ., ಜತೆಕಾರ್ಯದರ್ಶಿ ಜಾಸ್ಮಿನ್ ಧಾಕ್ಕ, ಸೈಕಿಯಾಟ್ರಿಕ್ ವಿಭಾಗ ಮುಖ್ಯಸ್ಥರಾದ ಡಾ.ಪೂನಮ್ ಉಪಸ್ಥಿತರಿದ್ದರು.