ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಬಿ ಬಿ ಎ ವಿದ್ಯಾರ್ಥಿಗಳಿಂದ ಕೈಗಾರಿಕಾ ಭೇಟಿ

0

ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯದ ವಾಣಿಜ್ಯ ಹಾಗೂ ಉದ್ಯಮಡಲಿತ ವಿಭಾಗದಿಂದ ಅ.12ರಂದು ಮೆಮೊರಂಡಮ್ ಆಫ್ ಅಂಡರ್ಸ್ಟ್ಯಾಂಡಿಂಗ್ ಪ್ರಯುಕ್ತ ಮುರುಳ್ಯ ಗ್ರಾಮದ ಕ್ಷೀರ ಎಂಟರ್ಪ್ರೈಸಸ್ ಕೈಗಾರಿಕಾ ಸಂಸ್ಥೆಗೆ ಭೇಟಿ ನೀಡಲಾಯಿತು.
ಕ್ಷೀರ ಎಂಟರ್ಪ್ರೈಸಸ್ ಮಾಲೀಕರಾದ ಶ್ರೀಮತಿ ಮೈನಾ ಇವರು ವಿದ್ಯಾರ್ಥಿಗಳಿಗೆ ಕೈಗಾರಿಕೆಯ ಕೆಲಸದ ವಿಧಾನ ಹಾಗೂ ಕಡಿಮೆ ವೆಚ್ಚದ ಹಾಲು ಕರೆಯುವ ಯಂತ್ರಗಳ ತಯಾರಿಕೆಯಲ್ಲಿ ಒಳಗೊಂಡಿರುವ ಉತ್ಪಾದನಾ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದರು. ವಾಣಿಜ್ಯ ಹಾಗೂ ಉದ್ಯಮಡಲಿತ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಪುಷ್ಪ ಡಿ ಕೈಗಾರಿಕಾ ಭೇಟಿಯನ್ನು ಆಯೋಜಿಸಿದ್ದರು.ಪ್ರಥಮ ಮತ್ತು ತೃ ತೀಯ ಬಿ ಬಿ ಎ ವಿದ್ಯಾರ್ಥಿಗಳು ಭಾಗವಹಿಸಿದ್ದರು.