ಕೇನ್ಯ: ಪೇರಳಕಟ್ಟೆಯಲ್ಲಿ 25 ನೇ ವರ್ಷದ ಶಾರದೋತ್ಸವ

0


ಕೇನ್ಯದ ಪೇರಳಕಟ್ಟೆಯಲ್ಲಿ 25ನೇ ವರ್ಷದ ಶಾರದೋತ್ಸವ ಅ. 21ರಂದು ನಡೆಯಿತು. ಬೆಳಗ್ಗೆ ಶ್ರೀ ಶಾರದಾ ದೇವಿಯ ಪ್ರತಿಷ್ಠಾಪನೆಯ ಬಳಿಕ ಗಣಪತಿ ಹವನ, ಶ್ರೀ ಲಕ್ಷ್ಮೀನರಸಿಂಹ ಮಕ್ಕಳ ಭಜನಾ ತಂಡ ಪೇರಳಕಟ್ಟೆ ಇವರಿಂದ ಭಜನೆ, ನಂತರ ಶ್ರೀ ದುರ್ಗಾ ಕುಣಿತ ಭಜನೆ ತಂಡದಿಂದ ಕುಣಿತ ಭಜನೆ, ವಿದ್ಯಾಸಾಗರ ಭಜನಾ ತಂಡ ಸುಬ್ರಹ್ಮಣ್ಯ ಇವರಿಂದ ಭಕ್ತಿಗಾನ ಸುದೆ ಕಾರ್ಯಕ್ರಮ ನಡೆಯಿತು.

ಮದ್ಯಾಹ್ನ ಶಾರದಾ ದೇವಿಯ ಮಹಾಪೂಜೆ ಪ್ರಸಾದ ವಿತರಣೆ, ಅಕ್ಷರಾಭ್ಯಾಸ, ಬಳಿಕ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಮಹಾಪೂಜೆ ಶ್ರೀ ದೇವಿಯ ಶೋಭಾಯಾತ್ರೆ ಮೂಲಕ ಜಲಸ್ಥಂಭನಗೊಳಿಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಪ ಗ್ರಾ.ಪಂ. ಅಧ್ಯಕ್ಷ ಹರ್ಷಿತ್ ಕಾರ್ಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನೇಮಿರಾಜ್ ಪಲ್ಲೋಡಿ, ಸತ್ಯನಾರಾಯಣ ಭಟ್ ಕಾಯಂಬಾಡಿ, ಶ್ರೀಮತಿ ಕುಸುಮ ಎಸ್ ರೈ ಕೇನ್ಯ ಹೊಸಮನೆ ಉಪಸ್ಥಿತರಿದ್ದರು. ಆರಾಧನಾ ಸಮಿತಿಯ ಅಧ್ಯಕ್ಷ ಯುವರಾಜ್ ಕಣ್ಕಲ್, ಕಾರ್ಯದರ್ಶಿ ಸಮಿತ್ ಪೋಲೆ, ಉತ್ಸವ ಸಮಿತಿಯ ಅಧ್ಯಕ್ಷ ರೇಣುಕಾ ಪ್ರಸಾದ್ ಬಡ್ಡಕೋಟಿ ಹಾಗೂ ಸದಸ್ಯರು ವೇದಿಕೆಯಲ್ಲಿದ್ದರು.

ಅನಂತ ಕೃಷ್ಣ ಭಟ್, ಕೇನ್ಯ ಹೊಸಮನೆ ಆನಂದ ರೈ, ಯುವರಾಜ್ ಕಣ್ಕಲ್, ನಿವೃತ್ತ ಜನ ಮೆಚ್ಚಿದ ಶಿಕ್ಷಕ ಬೆಳ್ಯಪ್ಪ ಗೌಡ, ವಿಗ್ರಹ ಶಿಲ್ಪಿ ಐತ ಪಟಾಜೆಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪ್ರಸನ್ನ. ವೈ. ಟಿ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅಂಗನವಾಡಿ ಪುಟಾಣಿ ಗಳಿಂದ ಮತ್ತು ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಥಳೀಯ ಹಾಗೂ ಪ್ರಸಿದ್ಧ ಅತಿಥಿ ಕಲಾವಿದರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.