ನ.3, 4 ಮತ್ತು 5 ರಂದು ಸುಳ್ಯ ಅನ್ಸಾರಿಯಾದಲ್ಲಿ ಆರ್ಟ್ಸ್ ಅಲೈವ್

0

ರಾಜ್ಯ ಮಟ್ಟದ ಮುಹ್ಯುದ್ದೀನ್ ಮಾಲೆ ಆಲಾಪನೆ ಸ್ಪರ್ಧೆ : ಸಾಂಸ್ಕೃತಿಕ ವೈಭವ

ಸುಳ್ಯದ ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್ ನಲ್ಲಿ ನವೆಂಬರ್ 3, 4 ಮತ್ತು 5 ರಂದು ಆರ್ಟ್ಸ್ ಅಲೈವ್ ಅನ್ಸಾರಿಯಾ ಕ್ಯಾಂಪಸ್ ಫೆಸ್ಟ್ ಜರುಗಲಿದೆ ಎಂದು ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್ ನ ಅಧ್ಯಾಪಕ ಅಡ್ವಕೇಟ್ ಅಬ್ದುಲ್ ಹಿಮಮಿ ಸಖಾಫಿ ಹೇಳಿದ್ದಾರೆ.

ನ.2 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮದ ವಿವರ ನೀಡಿದರು.

ನ.3 ರಂದು ಶುಕ್ರವಾರ ಜುಮ ನಮಝ್ ಬಳಿಕ, ಧ್ವಜಾರೋಹಣ ನಡೆಯುವುದು. ಸಂಜೆ 4 ಗಂಟೆಗೆ ರಾಜ್ಯ‌ಮಟ್ಟದ ಮುಹ್ಯುದ್ದೀನ್ ಮಾಲೆ ಆಲಾಪನೆ ಸ್ಪರ್ಧೆ ನಡೆಯುವುದು. ರಾಜ್ಯದ 20 ತಂಡಗಳು ಈ ಸ್ಪರ್ಧೆಯಲ್ಲಿ ‌ಭಾಗವಹಿಸಲಿದೆ ಎಂದು‌ ಹೇಳಿದರು.

ನ.4‌ಮತ್ತು 5 ರಂದು ಅನ್ಸಾರಿಯಾ ‌ವಿದ್ಯಾರ್ಥಿಗಳ ಸಾಂಸ್ಕೃತಿಕ ವೈಭವ ನಡೆಯಲಿದೆ. ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆ ವರೆಗೆ ದಾವಾ, ಗಿಫ್ ಳ್, ಮದರಸ ವಿದ್ಯಾರ್ಥಿಗಳ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು.

ಪತ್ರಿಕಾಗೋಷ್ಠಿಯಲ್ಲಿ ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್ ನ ಅಧ್ಯಕ್ಷ ಅಬ್ದುಲ್ ‌ಮಜೀದ್ ಜನತಾ, ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಕೋಶಾಧಿಕಾರಿ ಆದಂ ಹಾಕಿ ಕಮ್ಮಾಡಿ, ನಿರ್ದೇಶಕ ಕೆ.ಬಿ.ಇಬ್ರಾಹಿಂ, ಮ್ಯಾನೇಜರ್ ಮಹಮ್ಮದ್ ಉವೈಸ್ ಇದ್ದರು.