ಸುಬ್ರಹ್ಮಣ್ಯ: ಪುತ್ತೂರು ಎಸ್.ಆರ್.ಕೆ ಯ ಕೇಶವ ಎ ಅವರಿಗೆ ಕುಮಾರ್ ನಾಯರ್ ಸಾಧನಾ ಪ್ರಶಸ್ತಿ ಪ್ರದಾನ

0

ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ವಾರ್ಷಿಕ ದಿನಾಚರಣೆ ನ.12 ರಂದು ಎಸ್.ಆರ್.ಕೆ ಯ ಕೇಶವ ಎ ಅವರಿಗೆ ಕುಮಾರ್ ನಾಯರ್ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನ್ಯಾಯವಾದಿ ಜಯಪ್ರಕಾಶ್ ರೈ ಪ್ರಶಸ್ತಿ ಪ್ರದಾನ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ವಿದ್ಯಾರ್ಥಿನಿ ತಪಸ್ಯ ನಾಯಕ್ ವಹಿಸಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ಶೋಬಾ ಗಿರಿಧರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಅನುಗ್ರಹ ಟ್ರಸ್ಟ್ ನ ಅಧ್ಯಕ್ಷ ಗಣೇಶ್ ಪ್ರಸಾದ್, ಶಾಲಾ ಸಂಚಾಲಕ ಚಂದ್ರಶೇಖರ್, ಉಪಾಧ್ಯಕ್ಷ ಶಿವರಾಮ ಏನೆಕಲ್ಲು, ಸದಸ್ಯ ವೆಂಕಟ್ರಾಜು, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂಕೀರ್ತ್ ಹೆಬ್ಬಾರ್, ಪ್ರೌಢಶಾಲಾ ಮುಖ್ಯಸ್ಥೆ ಶ್ರೀಮತಿ ವಿದ್ಯಾರತ್ನ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಭಾರತೀ ದಿನೇಶ್, ಶಾಲಾ ನಾಯಕರುಗಳಾದ ಪ್ರೀತಂ, ಪ್ರದೇಶ್ ವೇದಿಕೆಯಲ್ಲಿದ್ದರು. ಚಂದ್ರಶೇಖರ ಸ್ವಾಗತಿಸಿ, ಶಿವರಾಮ ಏನೆಕಲ್ಲು ವಂದಿಸಿದರು. ವಿದ್ಯಾರ್ಥಿನಿಗಳಾದ ನಿವೇದಿತಾ ಗಣೇಶ್, ಪೂರ್ವಿ ಬಿ.ಆರ್ ಕಾರ್ಯಕ್ರಮ ನಿರೂಪಿಸಿದರು.