ಕಲ್ಲುಗುಂಡಿಯಲ್ಲಿ ಕೋಳಿ ದರದಲ್ಲಿ ಭರ್ಜರಿ ಇಳಿಕೆ

0

ಎರಡು ಅಂಗಡಿಗಳವರ ಕಾಂಫಿಟೀಶನ್ : ಕೆ.ಜಿ.ಗೆ 79 ರೂ. ಗೆ ಮಾರಾಟ

ಎರಡು ಕೋಳಿ ಅಂಗಡಿಗಳ ಮಧ್ಯೆ ದರದಲ್ಲಿ ಕಾಂಪಿಟೇಶನ್ ಏರ್ಪಟ್ಟು ದರ ಭಾರೀ ಇಳಿಕೆಯಾದ ಕಾರಣ ಅಂಗಡಿಗಳ ಮುಂದೆ ಕೋಳಿಗಾಗಿ ಜನ ಕ್ಯೂ ನಿಂತ ಘಟನೆ ಕಲ್ಲುಗುಂಡಿಯಿಂದ ವರದಿಯಾಗಿದೆ.

ಕಲ್ಲುಗುಂಡಿಯ ಸುಫ್ರಿಂ ಚಿಕನ್ ಸೆಂಟರ್‌ನಲ್ಲಿ ಕೋಳಿ ಮಾಂಸ ಖರೀದಿಗಾಗಿ ಕಾದು ನಿಂತಿರುವ ಗ್ರಾಹಕರು


ಕೆಲವು ದಿನಗಳಿಂದ ಬ್ರಾಯ್ಲರ್ ಮಾಂಸದ ಕೋಳಿಗಳಿಗೆ ದರ ಕಡಿಮೆಯಾಗಿದ್ದು, ಕಲ್ಲುಗುಂಡಿಯಲ್ಲಿ ಹನೀಫದ್ವಯರ ಎರಡು ಕೋಳಿ ಅಂಗಡಿಗಳ ಮಧ್ಯೆ ದರ ಸ್ಪರ್ಧೆ ಏರ್ಪಟ್ಟಿದೆ. ಒಂದು ಅಂಗಡಿಯವರು ಕೆ.ಜಿ.ಗೆ 85 ರೂ. ದರ ಇರಿಸಿದರೆ, ಇನ್ನೊಂದು ಅಂಗಡಿಯವರು 79 ರೂ.ಗೆ ದರ ನಿಗದಿಗೊಳಿಸಿದ್ದಾರೆ.
ದರ ಕಡಿಮೆಯಾಗಿರುವುದರಿಂದ ಕೋಳಿ ಖರೀದಿಗಾಗಿ ಜನರು ಅಂಗಡಿಗಳ ಮುಂದೆ ಇಂದು ಬೆಳಗ್ಗಿನಿಂದಲೇ ಕ್ಯೂ ನಿಂತಿರುವುದಾಗಿ ತಿಳಿದು ಬಂದಿದೆ. ಸುಳ್ಯ, ಬೆಳ್ಳಾರೆ, ಗುತ್ತಿಗಾರು ಮೊದಲಾದ ಪೇಟೆಗಳಲ್ಲಿ ಬ್ರಾಯ್ಲರ್ ಕೋಳಿಗಳ ದರ ಕೆ.ಜಿ.ಗೆ 1೦೦ರಿಂದ 120 ರ ವರೆಗೆ ಇದೆ.