ಮಂಡೆಕೋಲು ಶಿವಪ್ಪ‌ ನಾಯ್ಕ್ ನೇಣು ಬಿಗಿದು ಆತ್ಮಹತ್ಯೆ

0

ಮಂಡೆಕೋಲು ಗ್ರಾಮದ ಕುಟ್ಟಣಮೂಲೆ ಶಿವಪ್ಪ ನಾಯ್ಕ (65) ಎಂಬವರು‌ ನಿನ್ನೆ ಸಂಜೆ ಮನೆ‌ ಸಮೀಪದ ಮರವೊಂದಕ್ಕೆ ನೇಣು‌ ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಮನೆಯವರು ಸಂಜೆ ಸುಳ್ಯಕ್ಕೆ ಬಂದಿದ್ದರು. ವಾಪಸ್ ಮನೆಗೆ ಹೋಗುವಾಗ ಶಿವಪ್ಪ ನಾಯ್ಕರು ಮನೆಯಲ್ಲಿರಲಿಲ್ಲ. ಬಳಿಕ ಮನೆ ಸಮೀಪ ನೇಣು ಹಾಕಿ ಮೃತಪಟ್ಟಿರುವುದು ಕಂಡು ಬಂತು. ಪೋಲೀಸರು ಸ್ಥಳಕ್ಕೆ ‌ಬಂದು‌ಮಹಜರು ನಡೆಸಿದರು.

ಮೃತರು ಪತ್ನಿ ಗಿರಿಜಾ, ಮಗಳು ರಾಧಿಕ ಪದ್ಮನಾಭ ಮುಂಡೋಕಜೆ, ಮಗ ಹೇಮನಾಥ್ ಹಾಗು ಕುಟುಂಬಸ್ಥರನ್ನು ಅಗಲಿದ್ದಾರೆ.